ಇಂದಿನಿಂದ ಪ್ರಧಾನಿ ವಿದೇಶ ಪ್ರವಾಸ:ಮೋದಿ ಭೇಟಿಗಾಗಿ ಕಾಯುತ್ತಿರುವ ಯುರೋಪಿಯನ್ ಯೂನಿಯನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಮೂರು ದಿನಗಳ ಕಾಲ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಸೇನಾ ಕ್ರಮದ ಪರಿಣಾಮ ಮತ್ತು ಅದರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಯುರೋಪ್ ಭೇಟಿ ಕುತೂಹಲ ಮೂಡಿಸಿದೆ. ಯುರೋಪಿಯನ್ ಯೂನಿಯನ್ ಈಗಾಗಲೇ ಮೋದಿ ಭೇಟಿಯನ್ನು ಕುತೂಹಲದಿಂದ ಎದುರು ನೋಡುತ್ತಿದೆ.

ಪ್ರಸ್ತುತ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಭಾರತದ ತಟಸ್ಥ ಧೋರಣೆಯಿಂದ ಐರೋಪ್ಯ ರಾಷ್ಟ್ರಗಳು ಅತೃಪ್ತರಾಗಿರುವುದು ಸಹಜ. ಈ ಹಿನ್ನೆಲೆಯಲ್ಲಿ ಮೋದಿಯವರ ಯುರೋಪಿಯನ್ ರಾಷ್ಟ್ರಗಳ ಭೇಟಿ ಕುತೂಹಲ ಮೂಡಿಸಿದೆ. ಮೋದಿಯವರ ಯುರೋಪಿಯನ್ ದೇಶಗಳ ಭೇಟಿಯನ್ನು ಭಾರತೀಯ ಮತ್ತು ವಿದೇಶಿ ಸಮುದಾಯಗಳು ನಿರ್ಣಾಯಕವೆಂದು ಪರಿಗಣಿಸಿವೆ. ಉಕ್ರೇನ್‌ನ ಕಟ್ಟಾ ಬೆಂಬಲಿಗರಾಗಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು. ಉಭಯ ದೇಶಗಳು ದ್ವಿಪಕ್ಷೀಯ ಸಂಬಂಧಕ್ಕೆ ಆದ್ಯತೆ ನೀಡಿವೆ. ಈ ಹಿನ್ನೆಲೆಯಲ್ಲಿ ಮೋದಿಯವರ ಯುರೋಪ್ ದೇಶಗಳ ಭೇಟಿಯೂ ಈ ದಿಸೆಯಲ್ಲಿ ಮುಂದುವರಿಯಲಿದೆಯಂತೆ.

ವಿದೇಶ ಪ್ರವಾಸದ ಅಂಗವಾಗಿ ಮೋದಿ ಮೊದಲು ಜರ್ಮನಿಗೆ ಭೇಟಿ ನೀಡಿದ್ದಾರೆ. ನಂತರ ಡೆನ್ಮಾರ್ಕ್ ಅಲ್ಲಿಂದ ಮೇ 4 ರಂದು ಭಾರತಕ್ಕೆ ವಾಪಸಾಗಲಿದ್ದಾರೆ. ಭೇಟಿಯ ಭಾಗವಾಗಿ ಮೋದಿ ಏಳು ದೇಶಗಳ ಎಂಟು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. 25 ಸಭೆಗಳಲ್ಲಿ ಪಾಲ್ಗೊಳ್ಳುತ್ತಿರುವ ಮೋದಿ ಅವರು 50 ಪ್ರಮುಖ ಉದ್ಯಮಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ವಿದೇಶದಲ್ಲಿರುವ ಭಾರತೀಯರೊಂದಿಗೂ ಪ್ರಧಾನಿ ಮಾತನಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!