ಟೀಂ ಇಂಡಿಯಾ ಪ್ರಮುಖ ವೇಗಿಗೆ ಕೊರೋನಾ: ಆಸಿಸ್‌ ವಿರುದ್ಧದ ಸರಣಿಯಿಂದ ಔಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಟಿ 20 ವಿಶ್ವಕಪ್‌ ಗೆ ಸಜ್ಜಾಗುತ್ತಿರುವ ಭಾರತ ತಂಡ ಅದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಸಜ್ಜಾಗಿದೆ. ಇದೇ ಸೆ. 20 ರಂದು ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ. ಮೊದಲ ಸೆಣಸಾಟಕ್ಕೆ ಈಗಾಗಲೇ ಮೊಹಾಲಿ ತಲುಪಿರು ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ನಡುವೆ ಬೇಸರದ ಸಂಗತಿಯೊಂದು ಹೊರಬಿದ್ದಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದು, ಪಾಸಿಟಿವ್‌ ವರದಿಯ ಬಳಿಕ ಸರಣಿಯಿಂದ ಹೊರಬಿದ್ದಿದ್ದಾರೆ.
32ರ ಹರೆಯದ ವೇಗಿ ಶಮಿ ತಂಡದೊಂದಿಗೆ ಮೊಹಾಲಿಗೆ ಪ್ರಯಾಣಿಸಿರಲಿಲ್ಲ. ಸೋಂಕಿಗೆ ತುತ್ತಾಗಿರುವ ಶಮಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಪ್ರತ್ಯೇಕವಾಸದಲ್ಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಶಮಿಗೆ ಬದಲಿಯಾಗಿ ಅನುಭವಿ ವೇಗಿ ಉಮೇಶ್ ಯಾದವ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಸುಮಾರು ಒಂದು ವರ್ಷದ ನಂತರ ಟಿ 20 ಸರಣಿಗೆ ಗೆ ಆಯ್ಕೆಯಾಗಿದ್ದ ಶಮಿಗೆ ಇದು ಅನಿರೀಕ್ಷಿತ ಹಿನ್ನಡೆಯಾಗಿದೆ. ಅದರ ಜೊತೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ ನಲ್ಲಿ ಭಾಗಿಯಾಗುವ ಶಮಿ ಕನಸು ಬಹುತೇಕ ಭಗ್ನವಾಗಿದೆ. ನವೆಂಬರ್ 2021 ರಲ್ಲಿ ಯುಎಇಯಲ್ಲಿ ನಡೆದ ಟ್ವೆಂಟಿ 20 ವಿಶ್ವಕಪ್‌ನಲ್ಲಿ ಅವರು ಕೊನೆಯ ಬಾರಿಗೆ ಟಿ 20 ಪಂದ್ಯ ಆಡಿದ್ದರು.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಯಲ್ಲಿನ ಪರಿಣಾಮಕಾರಿ ಪ್ರದರ್ಶನವು ತಂಡದ ನಾಲ್ವರು ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಹರ್ಷಲ್ ಪಟೇಲ್ ಅವರ ವಿಶ್ವಕಪ್ ತಂಡದ ಸ್ಥಾನ ವನ್ನು ನಿರ್ಧರಿಸಲಿದೆ.
ಆದಾಗ್ಯೂ, ಸೆಪ್ಟೆಂಬರ್ 28 ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯು ಶಮಿಗೆ ನಿರ್ಣಾಯಕವಾಗಿದ್ದು, ಅವರು ಕೋವಿಡ್ -19 ನಿಂದ ಚೇತರಿಸಿಕೊಳ್ಳುವುದರ ಮೇಲೆ ಟಿ 20 ವಿಶ್ವಕಪ್‌ ಗೆ ಅವರ ಉಪಸ್ಥಿತಿಯು ನಿರ್ಣಯವಾಗಲಿದೆ. ಶಮಿ ವಿಶ್ವಕಪ್‌ ತಂಡದ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (c), KL ರಾಹುಲ್ (VC), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!