ಹೊಸದಿಗಂತ ಡಿಜಿಟಲ್ ಡೆಸ್ಕ್:
ಐದು ದಿನಗಳ ಮಂಗಳೂರು ಪ್ರವಾಸದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಸಂಘದ ವಿವಿಧ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ . ಭಾನುವಾರ ಅವರು ನಗರದ ಸಂಘನಿಕೇತನದ ಬಳಿ ನಿರ್ಮಿಸಲಾದ ನೂತನ ಸಂಘ ಕಾರ್ಯಾಲಯಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಇದೇ ಸಂದರ್ಭ ಅವರು ಕಾರ್ಯಾಲಯದ ಆವರಣದಲ್ಲಿ ಸ್ವರ್ಣಚಂಪಕ ಗಿಡವೊಂದನ್ನು ನೆಡುವ ಮೂಲಕ ಮಂಗಳೂರು ಭೇಟಿಯನ್ನು ಸ್ಮರಣೀಯವಾಗಿಸಿದರು.
ಈ ಸಂದರ್ಭ ಸಂಘದ ಸಹಸರ ಕಾರ್ಯವಾಹ ಮುಕುಂದ ಸಿ.ಆರ್, ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ್ ಡಾ.ಪಿ. ವಾಮನ್ ಶೆಣೈ, ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಪ್ರಾಂತ ಸಂಘಚಾಲಕ ಜಿ.ಎಸ್ ಉಮಾಪತಿ, ಪ್ರಾಂತ ಸಹ ಕಾರ್ಯವಾಹ ಪಿ.ಎಸ್.ಪ್ರಕಾಶ್, ಮಂಗಳೂರು ವಿಭಾಗ ಸಂಘಚಾಲಕ ಡಾ.ನಾರಾಯಣ ಶೆಣೈ ಮತ್ತಿತರರು ಉಪಸ್ಥಿತರಿದ್ದರು.