Saturday, August 13, 2022

Latest Posts

ಸೋಮವಾರಪೇಟೆ: ಹುಲಿ ದಾಳಿಗೆ ಹಸು ಬಲಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಸೋಮವಾರಪೇಟೆ:

ಹುಲಿ ದಾಳಿಗೆ ಜಾನುವಾರು ಸಾವನ್ನಪ್ಪಿದ ಘಟನೆ ಸಮೀಪದ ನೇಗಳ್ಳೆ ಗ್ರಾಮದಲ್ಲಿ ನಡೆದಿದೆ.
ನೇಗಳ್ಳೆ ಗ್ರಾಮದ ರಾಮ್‍ದೇವ್ ಅವರಿಗೆ ಸೇರಿದ ಎರಡು ವರ್ಷದ ಜಾನುವಾರನ್ನು ಮೇಯಲು ಬಿಟ್ಟಿದ್ದ ಸಂದರ್ಭ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ.
ಕಳೆದೆರಡು ದಿನಗಳ ಹಿಂದೆ ಕಾಣೆಯಾಗಿದ್ದ ಜಾನುವಾರನ್ನು ಹುಡುಕಾಡಿದ ಸಂದರ್ಭ ಅರಣ್ಯ ಪ್ರದೇಶಕ್ಕೆ ಒತ್ತಿಕೊಂಡಿರುವ ಸ್ಥಳದಲ್ಲಿ ಕಳೇಬರ ಕಂಡುಬಂದಿದೆ. ಇದರೊಂದಿಗೆ ಗ್ರಾಮದ ಚಿಕ್ಕೀರಪ್ಪ, ಮೂರ್ತಿ ಅವರಿಗೆ ಸೇರಿದ ಎರಡು ಹಸುಗಳ ಮೇಲೂ ಹುಲಿ ದಾಳಿ ನಡೆಸಿದ್ದು, ಅದೃಷ್ಟವಶಾತ್ ಜಾನುವಾರುಗಳು ಪ್ರಾಣಾಪಾಯದಿಂದ ಪಾರಾಗಿವೆ. ಹುಲಿ ದಾಳಿಯಿಂದಾಗಿ ಗಾಯಗೊಂಡಿರುವ ಹಸುಗಳಿಗೆ ಪಶುವೈದ್ಯಕೀಯ ಇಲಾಖಾ ವೈದ್ಯರು ಆರೈಕೆ ಮಾಡಿದ್ದಾರೆ.
ಈ ವ್ಯಾಪ್ತಿಯಲ್ಲಿ ಹುಲಿ ದಾಳಿ ನಿರಂತರವಾಗಿದ್ದು, ಅರಣ್ಯ ಇಲಾಖೆ ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು. ಸಾವನ್ನಪ್ಪಿದ ಜಾನುವಾರಿಗೆ ಸೂಕ್ತ ಪರಿಹಾರ ನೀಡಬೇಕು. ಗಾಯಗೊಂಡ ಜಾನುವಾರುಗಳಿಗೆ ಇಲಾಖೆಯಿಂದಲೇ ಚಿಕಿತ್ಸಾ ವೆಚ್ಚ ಭರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss