ಗಾಲ್ವಾನ್‌ ಸಂಘರ್ಷ ನಡೆದಿದ್ದ ಗೋಗ್ರಾ-ಹಾಟ್‌ಸ್ಪ್ರಿಂಗ್ಸ್ ಪ್ರದೇಶದಿಂದ ಭಾರತ- ಚೀನಾ ಸೇನೆ ಹಿಂತೆಗೆತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಎರಡೂ ಕಡೆಯ ಉನ್ನತ ಮಿಲಿಟರಿ ಕಮಾಂಡರ್‌ಗಳ ನಡುವಿನ ಸಭೆಯ ಫಲಶೃತಿಯಾಗಿ ಭಾರತ ಮತ್ತು ಚೀನಾದ ಸೈನಿಕರು ಈ ಹಿಂದೆ ಉಭಯ ರಾಷ್ಟ್ರಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ವಿವಾದಿತ ಹಿಮಾಲಯದ ಗಡಿ ಪ್ರದೇಶದಿಂದ ಹಿಂದೆ ಸರಿಯಲು ಪ್ರಾರಂಭಿಸಿದ್ದಾರೆ. ಈ ಕುರಿತು ಭಾರತದ ರಕ್ಷಣಾ ಸಚಿವಾಲಯವು ಮಾಹಿತಿ ನೀಡಿದೆ.
“ಭಾರತ ಚೀನಾ ಕಾರ್ಪ್ಸ್ ಕಮಾಂಡರ್ ಲೆವೆಲ್ ಮೀಟಿಂಗ್‌ ನಲ್ಲಿ ಒಮ್ಮತದ ನಿರ್ಧಾರ ಕೈಗೊಂಡ ಪ್ರಕಾರ, ವಿವಾದಿತ ಗೋಗ್ರಾ-ಹಾಟ್‌ಸ್ಪ್ರಿಂಗ್ಸ್ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಪಡೆಗಳು ಹಿಂದಕ್ಕೆ ತೆರಳಲು ಪ್ರಾರಂಭಿಸಿವೆ. “ಈ ಪ್ರದೇಶದಲ್ಲಿ ಹಂತಹಂತವಾಗಿ, ಸೈನಿಕರ ನಿಯೋಜನೆಯನ್ನು ಕಡಿಮೆಗೊಳಿಸಲು ಎರಡು ಕಡೆಯವರು ಒಪ್ಪಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಎರಡೂ ಕಡೆಯ ಪಡೆಗಳು ತಮ್ಮ ಪ್ರದೇಶಗಳಿಗೆ ಮರಳುತ್ತಿವೆ. ಸೈನಿಕರ ಸಂಪೂರ್ಣ ವಾಪಾಸಾತಿ ಸೆಪ್ಟೆಂಬರ್ 12 ರೊಳಗೆ ಪೂರ್ಣಗೊಳ್ಳಲಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಕ್ರಮವು “ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಗೆ ಅನುಕೂಲಕರವಾಗಿದೆ.” ಎಂದು ಚೀನಾದ ರಕ್ಷಣಾ ಸಚಿವಾಲಯವು ಅಭಿಪ್ರಾಯಪಟ್ಟಿದೆ.
2020 ರ ಬೇಸಿಗೆಯಲ್ಲಿ ಗೋಗ್ರಾ-ಹಾಟ್‌ಸ್ಪ್ರಿಂಗ್ಸ್ ನಡುವುಇನ ಗಾಲ್ವಾನ್‌ ನಲ್ಲಿ ಎರಡು ಪರಮಾಣು ಶಸ್ತ್ರಸಜ್ಜಿತ ʼನೆರೆಹೊರೆʼ ರಾಷ್ಟ್ರಗಳ ನಡುವೆ ಕಳೆದ ನಲವತ್ತು ವರ್ಷಗಳಲ್ಲೇ ಅತ್ಯಂತ ಕೆಟ್ಟ ಘರ್ಷಣೆ ಉಂಟಾಗಿತ್ತು. ಆ ವೇಳೆ ಭಾರತೀಯರನ್ನು ಕೆಣಕಿ ಹಲವಾರು ಚೀನೀ ಸೈನಿಕರು ಕೊಲ್ಲಲ್ಪಟ್ಟಿದ್ದರು. ಆ ಬಳಿಕ ಉಭಯ ರಾಷ್ಟ್ರಗಳ ನಡುವೆ  ತಲೆದೂರಿದ್ದ ಉದ್ವಿಗ್ನತೆಯನ್ನು ಕಡಿಮೆಗೊಳಿಸುವಲ್ಲಿ ಇದು ಅತ್ಯಂತ ಮಹತ್ವದ ಪ್ರಯತ್ನವಾಗಿದೆ.
ಎರಡೂ ಕಡೆಯವರು ತಮ್ಮ ವಿವಾದಿತ 3,488 ಕಿಲೋಮೀಟರ್ (2,170 ಮೈಲಿ) ಗಡಿಯುದ್ದಕ್ಕೂ ಪಡೆಗಳನ್ನು ಸ್ಥಳಾಂತರಿಸಿದ್ದಾರೆ. ಆದರೆ, ಆದರೆ, ಪ್ರತಿಕೂಲ ಭೂಪ್ರದೇಶದಲ್ಲಿ ಹತ್ತಾರು ಸಾವಿರ ಸೈನಿಕರನ್ನು ಅಲ್ಲಿಯೇ ಉಳಿಸಲಾಗಿದೆ.
ಪಡೆಗಳ ಜೊತೆಗೆ ಫಿರಂಗಿ, ಬಂದೂಕುಗಳು ಮತ್ತು ಟ್ಯಾಂಕ್‌ಗಳನ್ನು ಎರಡೂ ದೇಶಗಳು ತಮ್ಮ ಮೂಲ ನೆಲೆಗಳಿಗೆ ಹಿಂಪಡೆಯುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!