ಮನಿ ಪ್ಲಾಂಟ್‌ ಯಾವ ದಿಕ್ಕಿನಲ್ಲಿ ನೆಡಬೇಕು ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫೋಥೋಸ್ ಎಂಬ ರಾಸಾಯನಿಕ ಹೆಸರಿನ ಮನಿ ಪ್ಲಾಂಟ್ ಮನೆಗೆ ಅದೃಷ್ಟವನ್ನು ಹೊತ್ತು ತರುತ್ತದೆ ಎಂದು ಬೆಳೆಸಲಾಗುತ್ತದೆ.  ನೈಸರ್ಗಿಕವಾಗಿ ಗಾಳಿಯನ್ನು ಶುದ್ಧೀಕರಿಸುತ್ತವೆ ಎಂದು ಹೇಳಲಾಗುತ್ತದೆ. ವಿಷಾನಿಲವನ್ನು ಫಿಲ್ಟರ್‌ ಮಾಡಿ ಉತ್ತಮ ಗಳಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಮನಿ ಪ್ಲಾಂಟ್‌ ಅನ್ನು ಯಾವಾಗಲೂ ಸರಿಯಾದ ದಿಕ್ಕಿನಲ್ಲಿ ನೆಡಬೇಕು ಎಂದು ವಾಸ್ತು ಸಿದ್ಧಾಂತ ಹೇಳುತ್ತದೆ.

ಈಶಾನ್ಯ ದಿಕ್ಕಿನಲ್ಲಿ ನೆಟ್ಟರೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಮನೆಯಲ್ಲಿ ನಕಾರಾತ್ಮಕತೆಯೂ ಹೆಚ್ಚಿರುತ್ತದೆ. ಅದನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಗಣೇಶ ಈ ದಿಕ್ಕನ್ನು ಪ್ರತಿನಿಧಿಸುವುದರಿಂದ ಸದಾ ಮಂಗಳಕರವಾಗಿರುತ್ತದೆ.

ಮನಿ ಪ್ಲಾಂಟ್ ಗಿಡ, ಬಳ್ಳಿಗಳು ನೆಲಕ್ಕೆ ತಾಗದಂತೆ ಎಚ್ಚರವಹಿಸಿ. ವಾಸ್ತು ಸಿದ್ಧಾಂತದ ಪ್ರಕಾರ.. ಬೆಳೆಯುವ ಬಳ್ಳಿಗಳು ಸಮೃದ್ಧಿಯ ಸಂಕೇತ. ಮನಿ ಪ್ಲಾಂಟ್ ಲಕ್ಷ್ಮಿ ದೇವಿಯ ರೂಪ ಎಂದು ನಂಬಲಾಗಿದೆ. ಅದು ನೆಲವನ್ನು ತಾಕದಂತೆ ನೋಡಿಕೊಳ್ಳಬೇಕು. ಒಣಗಿದ ಮನಿ ಪ್ಲಾಂಟ್ ದುರದೃಷ್ಟದ ಸಂಕೇತವಾಗಿದೆ.

ಮನಿ ಪ್ಲಾಂಟ್‌ಗೆ ಪ್ರತಿದಿನ ನೀರು ಹಾಕಿ. ಎಲೆಗಳು ಒಣಗಿದ್ದರೆ, ಅವುಗಳನ್ನು ತೆಗೆದುಹಾಕಿ. ಮನೆಯಲ್ಲಿ ಯಾವಾಗಲೂ ಮನಿ ಪ್ಲಾಂಟ್ ಇಟ್ಟುಕೊಳ್ಳಿ. ಈ ಸಸ್ಯಕ್ಕೆ ಹೆಚ್ಚು ಸೂರ್ಯನ ಬೆಳಕು ಅಗತ್ಯವಿಲ್ಲ, ಆದ್ದರಿಂದ ಇದನ್ನು ಮನೆಯೊಳಗೆ ನೆಡಬಹುದು. ನಿಧಾನಗತಿಯ ಸಸ್ಯ ಬೆಳವಣಿಗೆಯು ಅಶುಭಕರವಾಗಿದೆ. ಇದರಿಂದ ಆರ್ಥಿಕ ಕೊರತೆ ಉಂಟಾಗಲಿದೆ.

ವಾಸ್ತು ಪ್ರಕಾರ ಮನಿ ಪ್ಲಾಂಟ್‌ಗಳನ್ನು ದಾನ ಮಾಡುವುದಾಗಲೀ, ಕತ್ತರಿಸಿ ಬಳ್ಳಿ ಕೊಡುವುದಾಗಲೀ ಮಾಡಬಾರದು. ಇದು ಶುಕ್ರನನ್ನು ಕೆರಳಿಸುವುದರ ಜೊತೆಗೆ ಸದ್ಗುಣಗಳು ಕಳೆದುಹೋಗುತ್ತವೆ. ಮಳೆಗಾಲದಲ್ಲಿ ಈ ಬಳ್ಳಿಯಿಂದ ಹೆಚ್ಚು ರೋಗ ಹರಡುವ ಸಾಧ್ಯತೆಯಿದೆ. ಹಾಗಾಗಿಯೇ ವೈಜ್ಞಾನಿಜವಾಗಿ ಇದನ್ನು ಬೆಳೆಸಲು ಬಹಳ ಮಂದಿ ಇಷ್ಟಪಡುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!