ಕೇರಳದಲ್ಲಿ ಪತ್ತೆಯಾಯ್ತಾ ಮಂಕಿ ಫಾಕ್ಸ್‌ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತಿನೆಲ್ಲಡೆ ಭಯ ಹುಟ್ಟಿಸಿರುವ ಮಹಾಮಾರಿ ʼಮಂಕೀ ಫಾಕ್ಸ್‌ʼ ಖಾಯಿಲೆಯು ಈಗ ಭಾರತಕ್ಕೂ ಕಾಲಿಟ್ಟಿದೆ ಎಂಬ ವರದಿಗಳು ಹರಿದಾಡುತ್ತಿದ್ದು ಯುಎಇಯಿಂದ ಹಿಂದಿರುಗಿದ ಕೇರಳದ ನಿವಾಸಿಯೊಬ್ಬರು ಮಂಗನ ಕಾಯಿಲೆಯ ಶಂಕಿತ ರೋಗಲಕ್ಷಣಗಳನ್ನು ವರದಿ ಮಾಡಿದ್ದಾರೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ. ಮಾದರಿಗಳನ್ನು ಪರೀಕ್ಷೆಗಾಗಿ ಪುಣೆಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. ಪರೀಕ್ಷೆಯ ಫಲಿತಾಂಶ ಬಂದ ನಂತರವೇ ಖಚಿತ ಮಾಹಿತಿ ಸಿಗಲಿದೆ ಎಂದಿದ್ದಾರೆ.

ಮಂಕಿಪಾಕ್ಸ್ ರೋಗಲಕ್ಷಣಗಳನ್ನು ತೋರಿಸಿದ ವ್ಯಕ್ತಿಯು ವಿದೇಶದಲ್ಲಿ ರೋಗಿಯೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ವಿಶ್ವದಾದ್ಯಂತ 60 ಕ್ಕೂ ಹೆಚ್ಚು ದೇಶಗಳಲ್ಲಿ ಏಕಾಏಕಿ ರೋಗದ ಏರಿಕೆ ಕಂಡು ಬರುತ್ತಿದ್ದು ದೃಢಪಡಿಸಿದ ಪ್ರಕರಣಗಳ ಸಂಖ್ಯೆ 10,400 ದಾಟಿದೆ. ನಿಕಟ ಸಂಪರ್ಕದ ಮೂಲಕ ಹರಡುವ ಈ ರೋಗವು ಮಂಗಗಳಲ್ಲಿ ಮೊದಲು ಕಂಡುಬಂದಿತ್ತು. ಮಧ್ಯ ಆಫ್ರಿಕಾದಲ್ಲಿ ಮೊದಲು ಮನುಷ್ಯರಲ್ಲಿ ಕಾಣಿಸಿಕೊಂಡಿದ್ದು ಅಲ್ಲಿಂದ ಬೇರೆ ಬೇರೆ ದೇಶಗಳಿಗೆ ವ್ಯಾಪಿಸಿದೆ ಎನ್ನಲಾಗಿದೆ.

ಜುಲೈ 12 ರ ಹೊತ್ತಿಗೆ, ಯುನೈಟೆಡ್ ಕಿಂಗ್‌ಡಂ 1,735 ದೃಢಪಡಿಸಿದ ಪ್ರಕರಣಗಳನ್ನು ಹೊಂದಿದ್ದರೆ, ಸ್ಪೇನ್ 2,447 ಸೋಂಕುಗಳನ್ನು ವರದಿ ಮಾಡಿದೆ. ಜರ್ಮನಿ, ಫ್ರಾನ್ಸ್, ಗ್ರೀಸ್ ಮತ್ತು ಇತರ ಯುರೋಪಿಯನ್ ದೇಶಗಳು ಕೂಡ ಮಂಕಿಪಾಕ್ಸ್ ಸೋಂಕನ್ನು ವರದಿ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!