Wednesday, August 17, 2022

Latest Posts

ಪಾತ್ರೆಗಳನ್ನು ಕ್ಲೀನ್ ಆಗಿ ತೊಳೆಯುತ್ತೆ ನೋಡಿ ಈ ಕೋತಿ: ಇಲ್ಲಿದೆ ವೈರಲ್ ವಿಡಿಯೋ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಾಣಿಗಳ ತಮಾಷೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಬೇಗ ವೈರಲ್ ಆಗಿ ಬಿಡುತ್ತದೆ. ಕೆಲವೊಂದು ದೃಶ್ಯಗಳಂತು ನೆಟ್ಟಿಗರ ಗಮನ ಸೆಳೆಯದೆ ಇರೋದಿಲ್ಲ. ಅಂತಹದ್ದೇ ವಿಡಿಯೋವೊಂದು ಈಗ ವೈರಲ್ ಆಗಿದೆ.
ಇದರಲ್ಲಿ ಕೋತಿಯೊಂದು ನೀರಿನೊಳಗೆ ತುಂಬಿಸಿಟ್ಟಿದ್ದ ಪಾತ್ರೆಗಳನ್ನು ತೊಳೆದು ಪಕ್ಕಕ್ಕೆ ಇಟ್ಟಿದೆ.

ಏನಿದೆ ವಿಡಿಯೋದಲ್ಲಿ?

ಹೊಟೇಲ್ ಮುಂದೆ ಮಾಲೀಕನು ಅಡುಗೆ ಪಾತ್ರೆಗಳನ್ನು ಒಂದು ಬಾಣಲಿಯಲ್ಲಿ ಹಾಕಿ ನೀರು ತುಂಬಿಸಿದ್ದಾರೆ. ಈ ಬಾಣಲಿಯ ಮೇಲೆ ಬಂದು ಕುಳಿತ ಕೋತಿ ತನ್ನ ಕೈ ನಲ್ಲೇ 2-3 ತಟ್ಟೆಗಳಿಗೆ ನೀರು ಹಾಕಿ, ಕೈ ನಲ್ಲಿ ಉಜ್ಜಿ ಕ್ಲೀನ್ ಮಾಡಿದೆ.
ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, ಕೋತಿ ಕೆಲಸ ಮಾಡುತ್ತಿರುವುದನ್ನು ನೋಡಿ ಮನೆಯಲ್ಲಿರುವವರು ಕೆಲಸ ಮಾಡಲು ಕಲಿಯಬೇಕು ಎಂದು ಟ್ವೀಟ್ ಗೆ ಕಮೆಂಟ್ ಮಾಡಿ ಎಂಜಾಯ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!