ಈ ವ್ಯಕ್ತಿಗೆ ಒಟ್ಟಿಗೆ ವಕ್ಕರಿಸಿತು ಮಂಕಿಪಾಕ್ಸ್,​ ಕೋವಿಡ್​ , ಏಡ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಟಾಲಿ ದೇಶದ​​ ವ್ಯಕ್ತಿ ಜ್ವರ, ಆಯಾಸ ಹಾಗು ಗಂಟಲು ನೋವೂ ಸೇರಿದಂತೆ ವಿವಿಧ ರೋಗಲಕ್ಷಣಗಳನ್ನು ಕಂಡ ಹಿನ್ನೆಲ ವೈದ್ಯಕೀಯ ಪರೀಕ್ಷೆ ನಡೆಸಿದ್ದು, , ಈ ಸಂದರ್ಭದಲ್ಲಿ ಆತನಲ್ಲಿ ಮಂಕಿಪಾಕ್ಸ್​, ಕೋವಿಡ್​ ಹಾಗೂ ಏಡ್ಸ್ (HIV) ಒಟ್ಟಿಗೆ ದೃಢಪಟ್ಟಿದೆ ಎಂಬ ಶಾಕಿಂಗ್ ಮಾಹಿತಿ ಸಿಕ್ಕಿದೆ.
ಈ ಮೂರೂ ಸೋಂಕುಗಳು ಒಟ್ಟಿಗೆ ಹೊಂದಿರುವ ವಿಶ್ವದ ಮೊದಲ ಮತ್ತು ಅಪರೂಪದ ಪ್ರಕರಣ ಇದಾಗಿದೆ.

ಸ್ಪೇನ್​​ ಪ್ರವಾಸದಲ್ಲಿದ್ದ ವ್ಯಕ್ತಿ ಕಳೆದ ಕೆಲ ದಿನಗಳ ಹಿಂದೆ ಇಟಲಿಗೆ ವಾಪಸ್​ ಆಗಿದ್ದ. ಆತನಲ್ಲಿ ಕೋವಿಡ್​​ನ ಕೆಲವು ಸೋಂಕು ಲಕ್ಷಣ ಕಾಣಿಸಿಕೊಂಡಿದ್ದು ತಪಾಸಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಮಂಕಿಪಾಕ್ಸ್​, ಕೋವಿಡ್​ ಹಾಗೂ ಏಡ್ಸ್ (HIV) ಅಂಟಿಕೊಂಡಿರುವುದು ಗೊತ್ತಾಗಿದೆ.

36 ವರ್ಷದ ಈತ ಜೂನ್​​ 16 ರಿಂದ 20 ರವರೆಗೆ ಐದು ದಿನ ಸ್ಪೇನ್​​ನಲ್ಲಿ ಉಳಿದುಕೊಂಡಿದ್ದ. ಈ ವೇಳೆ ಅಲ್ಲಿ ಅನೇಕ ಪುರುಷರೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ವೈದ್ಯರಲ್ಲಿ ಆತನೇ ಹೇಳಿದ್ದಾನೆ.
ಮನೆಗೆ ಹಿಂತಿರುಗಿರುವ ವ್ಯಕ್ತಿಯಲ್ಲಿ ಕೋವಿಡ್​​​ ಇರುವುದು ದೃಢಗೊಂಡಿದ್ದು, ಮಂಕಿಪಾಕ್ಸ್​​ನ ಗುಣಲಕ್ಷಣಗಳೂ ಕಾಣಿಸಿಕೊಂಡಿವೆ. ಕೈಕಾಲು, ಮುಖ ಹಾಗೂ ದೇಹದ ಇತರೆ ಭಾಗಗಳಲ್ಲಿ ಗುಳ್ಳೆಗಳೆದ್ದಿವೆ. ಹೀಗಾಗಿ, ಇಟಲಿಯ ಕ್ಯಾಟಾನಿಯಾದ ಸ್ಯಾನ್​ ಮಾರ್ಕೊ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪರೀಕ್ಷೆ ನಡೆಸಿದ ಬಳಿಕ ಸಾಂಕ್ರಾಮಿಕ ರೋಗಗಳ ಘಟಕಕ್ಕೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.

2021ರ ಸೆಪ್ಟೆಂಬರ್​ ತಿಂಗಳಲ್ಲಿ ಈ ವ್ಯಕ್ತಿಗೆ ಕೊನೆಯದಾಗಿ ಎಚ್​​ಐವಿ ಸೋಂಕಿನ ಪರೀಕ್ಷೆ ನಡೆಸಲಾಗಿತ್ತು. ವರದಿ ನೆಗೆಟಿವ್​ ಬಂದಿತ್ತು. ಆದರೆ, ಸ್ಪೇನ್​​ನಲ್ಲಿ ಅಸುರಕ್ಷಿತ ಲೈಂಗಿಕ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರಿಂದ ಮತ್ತೆ ಸೋಂಕು ತಗುಲಿದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!