ಮಂಗಳೂರಿಗೆ ಬಂದಿಳಿದ ಪ್ರಯಾಣಿಕಗೆ ಮಂಕಿಪಾಕ್ಸ್: 35 ಮಂದಿಗೆ ಐಸೋಲೇಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣ ಮೂಲಕ ಬಂದಿಳಿದಿದ್ದ ಕೇರಳದ ಪ್ರಯಾಣಿಕನಲ್ಲಿ ಮಂಕಿಪಾಕ್ಸ್ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಆತನ ಸಂಪರ್ಕಕ್ಕೆ ಬಂದ ಒಟ್ಟು 35 ಮಂದಿಯನ್ನು ಐಸೋಲೇಷನ್ ಗೆ ಒಳಪಡಿಸಲಾಗಿದೆ.
ಈ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವ ಸಹ ಪ್ರಯಾಣಿಕರು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಐಸೋಲೇಷನ್ ನಲ್ಲಿರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ರೋಗಲಕ್ಷಣ ಕಾಣಿಸಿಕೊಂಡ ಪ್ರಯಾಣಿಕನನ್ನು ಈಗಾಗಲೇ ಪರಿಯಾರಂ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಗಾ ಇರಿಸಲಾಗಿದೆ. ಮಾದರಿ ಸಂಗ್ರಹಿಸಿ ಪುಣೆಯಲ್ಲಿರುವ ವೈರಾಲಜಿ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಕೇರಳದಲ್ಲಿ ಮೊದಲ ಮಂಕಿಫಾಕ್ಸ್ ಪ್ರಕರಣ ಜು.12 ರಂದು ದಾಖಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!