ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಲಾಕ್ಡೌನ್ ನಿಂದ ರಾಜ್ಯದ ಪ್ರವಾಸಿ ತಾಣಗಳು ಬಂದ್ ಆಗಿದ್ದು, ಇದರಿಂದ ವಾಹನ ಸಂಚಾರ ಹಲವು ಭಾಗಗಳಲ್ಲಿ ವಿರಳವಾಗಿರುವುದರಿಂದ ಹಲವು ಭಾಗಗಳಲ್ಲಿ ಪ್ರವಾಸಿಗರು ನೀಡುವ ಆಹಾರವನ್ನೇ ಅವಲಂಬಿಸಿದ್ದ ಮಂಗಗಳು ಸೇರಿದಂತೆ ಹಲವು ಪ್ರಾಣಿಗಳು ಸಮಸ್ಯೆ ಎದುರಿಸಿದೆ.
ಈ ಹಿನ್ನೆಲೆ ಭಜರಂಗ ದಳ ಕಾರ್ಯಕರ್ತರು ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಹಣ್ಣುಗಳನ್ನು ನೀಡುವ ಕಾರ್ಯ ಮಾಡುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಆಹಾರಕ್ಕಾಗಿ ಮಂಗಗಳು ಪರದಾಡುತ್ತಿದ್ದವು. ಇದನ್ನು ಮನಗಂಡ ಭಜರಂಗದಳ ಕಾರ್ಯಕರ್ತರು 1000 ಕೆ.ಜಿ ಬಾಳೆ ಹಣ್ಣುಗಳನ್ನು ನೀಡುತ್ತಿದ್ದರು. ಈ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ನಳಿನ್ ಕುಮಾರ್ ಕಟೀಲ್, ತಮ್ಮ ವಾಹನ ನಿಲ್ಲಿಸಿ ಘಾಟ್ ನಲ್ಲಿ ಕೆಲಹೊತ್ತು ಮಂಗಗಳಿಗೆ ಹಣ್ಣು ನೀಡಿದರು.