ಜುಲೈ- ಆಗಸ್ಟ್‌ ಅವಧಿಯಲ್ಲಿ ಮಳೆ ಕೊರತೆ: ಬೇಸಿಗೆ ಕೃಷಿಗೆ ಹೊಡೆತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಾಲ್ಕು ತಿಂಗಳ ಮುಂಗಾರು ಋತುವು ಶುಕ್ರವಾರ ಅಧಿಕೃತವಾಗಿ ಕೊನೆಗೊಂಡಿದ್ದು, ದೇಶದಲ್ಲಿ ಸರಾಸರಿಗಿಂತ ಶೇ.6 ರಷ್ಟು ಹೆಚ್ಚಿನ ಮಳೆಯಾಗಿದೆ. ಆದಾಗ್ಯೂ, ನಿರ್ಣಾಯಕ ಜುಲೈ- ಆಗಸ್ಟ್ ಅವಧಿಯಲ್ಲಿ ಕಡಿಮೆ ಮಳೆ ಸುರಿದಿದ್ದು ಗಂಗಾನದಿ ಬಯಲು ಪ್ರದೇಶದಲ್ಲಿ ದೊಡ್ಡ ಮಳೆ ಕೊರತೆಯನ್ನು ಉಂಟುಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಖಾರಿಫ್ (ಬೇಸಿಗೆ ಬಿತ್ತನೆ) ಬೆಳೆ ಪ್ರಮಾಣದಲ್ಲಿ ಶೇ. 1 ರಷ್ಟು ಕುಸಿತಕ್ಕೆ ಕಾರಣವಾಗಲಿದೆ.
ಆರು ರಾಜ್ಯಗಳಲ್ಲಿ ಉದ್ಭವಿಸಿದ ಬರ ಪರಿಸ್ಥಿತಿ ಬೇಸಿಗೆ ಬೆಳೆಗಳ ವಿಸ್ತೀರ್ಣವನ್ನು ಕೊಂಚಮಟ್ಟಿಗೆ ಮಿತಿಗೊಳಿಸಿದೆ. ಮುಂಗಾರು ಹಂಗಾಮು ಒಟ್ಟಾರೆ ಶೇ.6ರಷ್ಟು ಹೆಚ್ಚುವರಿ ಮಳೆಯೊಂದಿಗೆ ಕೊನೆಗೊಂಡಿದ್ದರೂ, ಮುಖ್ಯವಾಗಿ ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ಸೇರಿದಂತೆ ಆರು ರಾಜ್ಯಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಬೇಸಿಗೆ ಬೆಳೆಗಳ ವಿಸ್ತೀರ್ಣದಲ್ಲಿ ಕುಸಿತ ಕಂಡುಬಂದಿದೆ. ಭತ್ತದ ಬಿತ್ತನೆಯ ಪ್ರದೇಶದಲ್ಲಿ ಸುಮಾರು 5% ನಷ್ಟು ಕುಸಿತದಿಂದಾಗಿ ಖಾರಿಫ್ ಬೆಳೆಗಳ ಒಟ್ಟಾರೆ ವಿಸ್ತೀರ್ಣವು ಹೆಚ್ಚಿನದಾಗಿ ಕಡಿಮೆಯಾಗಿದೆಯಾದರೂ, ದೇಶದಲ್ಲಿ ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಬಿತ್ತನೆಯಲ್ಲಿಯೂ ಕುಸಿತ ವರದಿಯಾಗಿದೆ.


ಆದಾಗ್ಯೂ, ದೇಶದಲ್ಲಿ ಹೆಚ್ಚಿನ ಏರಿಳಿತಗಳಿಲ್ಲದ ʼಸಾಮಾನ್ಯʼ ಸುರಿಯುತ್ತಿರುವುದು ಸತತ ನಾಲ್ಕನೇ ವರ್ಷವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!