ಮುಂಗಾರು ಹಂಗಾಮಿನ ಬೆಳೆ ವಿಮೆ ಸಪ್ತಾಹಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಚಾಲನೆ

ಹೊಸದಿಗಂತ ವರದಿ, ಹಾವೇರಿ: 

ನನ್ನ ಬೆಳೆ ನನ್ನ ಹಕ್ಕು ಎಂಬುದನ್ನು ಕೃಷಿಕರು ಎಂದು ಮರೆಯಬಾರದು. ತನ್ನ ಹಕ್ಕನ್ನು ಪಡೆಯಲು ಕಡ್ಡಾಯವಾಗಿ ರೈತ ಮೊಬೈಲ್ ಬೆಳೆ ಆ್ಯಪ್ ಸಮೀಕ್ಷೆಯನ್ನು ಸ್ವತಃ ತಾನೇ ಮಾಡುವಂತೆ ಕರೆ ನೀಡಿದರು.
ಜಿಲ್ಲೆಯ ಹಿರೆಕೆರೂರಿನಲ್ಲಿ ಪ್ರಧಾನಮಂತ್ರಿ‌‌ ಫಸಲ್ ಬೀಮಾ‌ ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ‌ ವಿಮೆ‌ ಸಪ್ತಾಹ-2022-23 ಕ್ಕೆ ಚಾಲನೆ‌ ನೀಡಿ ಮಾತನಾಡಿದರು.
ಬೆಳೆಯ ವಿವರಗಳನ್ನು ಅಪ್ಲೋಡ್‌ ಮಾಡುವ ಮೂಲಕ ತನ್ನ ಜಮೀನಿನ ವಿವರ ಬೆಳೆ ವಿವರ ಎಲ್ಲಾ ಮಾಹಿತಿಯನ್ನು ಸ್ವತಃ ತಾನೇ ಹೊಂದಬೇಕು ಎಂದು ಕರೆ ನೀಡಿದರು.
ಕೃಷಿಕ ಬೆಳೆ ವಿಮೆಯಿಂದ ವಂಚಿತರಾಗಬಾರದೆಂದು ಸದುದ್ದೇಶದಿಂದ ಮೊಬೈಲ್‌ ಬೆಳೆ ಸಮೀಕ್ಷೆ ದೇಶದಲ್ಲಿನೇ ಪ್ರಥಮಬಾರಿಗೆ ರಾಜ್ಯದಲ್ಲಿ ಜಾರಿ ಮಾಡಲಾಯಿತಿ. ಈ ಯೋಜನೆಯ ಫಲಸೃತಿಯಿಂದಾಗಿ ಇಡೀ‌‌ ದೇಶವೇ ಕರ್ನಾಟಕದತ್ತ ನೋಡುವಂತಾಯಿತಲ್ಲದೆ ಕೇಂದ್ರ ಸರ್ಕಾರ ಕಳೆದ ಬಾರಿ ಕರ್ನಾಟಕದ ಕೃಷಿ ಇಲಾಖೆಯನ್ನು ಶ್ಲಾಘಿಸಿ ಈ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಮಾದರಿಯನ್ನು ಇತರೆ ರಾಜ್ಯಗಳಿಗೂ ಅನ್ವಯಿಸಲು ಮುಂದಾಗಿದೆ ಎಂದರು.
ಆರಂಭದಲ್ಲಿ‌ ‌ಈ ಸಮೀಕ್ಷೆಗೆ ದೊರೆತಂತಹ ಪ್ರತಿಕ್ರಿಯೆ ಸಾಧನೆ ಈ ಬಾರಿಯೂ ಆಗಬೇಕು. ಕಂದಾಯ, ತೋಟಗಾರಿಕೆ‌ ಸೇರಿದಂತೆ ಕೃಷಿ‌‌ ಇಲಾಖೆಯ ಅಧಿಕಾರಿಗಳು‌ ರೈತರೇ ಬೆಳೆ ಸಮೀಕ್ಷೆಯನ್ನು ಮಾಡಿ ವಿವರವನ್ನು ಮೊಬೈಲ್ ಆ್ಯಪ್‌ನಲ್ಲಿ‌ ದಾಖಲಿಸುವಂತೆ ಪ್ರೇರಿಸಬೇಕು.ಇದು ಆ‌ಇಲಾಖೆ ಇಲಾಖೆ ಕೆಲಸ ಎನ್ನದೇ ರೈತರ ಕೆಲಸ ಎಂಬುದನ್ನು ಅರಿತು ಈ‌ ಬಾರಿಯೂ ಇದರಲ್ಲಿ‌ ಸಾಧನೆ ಮಾಡಬೇಕು ಎಂದು ಹೇಳಿದರು.
ಜುಲೈ 1ರಿಂದ 7ರವರೆಗೆ ಬೆಳೆ ವಿಮೆ‌ ಸಪ್ತಾಹ ನಡೆಯಲಿದ್ದು, ಇದುವರೆಗೆ ಹಾವೇರಿ ಜಿಲ್ಲೆಯಲ್ಲಿ 27130 ರೈತರು ಬೆಳೆ ವಿಮೆ‌‌ ನೋಂದಣಿ ಮಾಡಿದ್ದು, ರಾಜ್ಯಾದ್ಯಂತ 3.30 ಲಕ್ಷ ರೈತರು ನೋಂದಣಿ ಮಾಡಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬೆಳೆ ವಿಮೆ ಮತ್ತು ಬೆಳೆ‌ ಸಮೀಕ್ಷೆ ಕುರಿತಾದ ಹಸ್ತಪ್ರತಿ, ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಗುರುಶಾಂತ ಯತ್ನಳ್ಳಿ, ಮಹೇಂದ್ರ ಬಡಳ್ಳಿ, ಜಂಟಿ ಕೃಷಿ ನಿರ್ದೇಶಕ ಬಿ.ಜುನಾಥ, ಉಪನಿರ್ದೇಶಕಿ ಸೇರಿದಂತೆ ಅನೇಕರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!