spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರೇ… ಮಳೆಗಾಲದಲ್ಲಿ ನಿಮ್ಮ ಕೂದಲಿಗೆ ಹಿತವಾದ ಆರೈಕೆ ಬೇಕೇ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ…

- Advertisement -Nitte

ಮಳೆಗಾಲ ಶುರುವಾದ ತಕ್ಷಣ ಮಹಿಳೆಯರ ತಲೆ ಕೂದಲ ಸಮಸ್ಯೆ ದುಪ್ಪಟ್ಟಾಗುತ್ತದೆ. ಈ ಸಮಯದಲ್ಲಿ ಕೂದಲಿಗೆ ಇತರ ಸಮಯಕ್ಕಿಂತಲೂ ಹೆಚ್ಚಿನ ಆರೈಕೆ ಹಾಗೂ ಕಾಳಜಿಯನ್ನು ವಹಿಸಬೇಕಾಗುತ್ತದೆ. ಹೇಗೆ ಕಾಳಜಿ ವಹಿಸುವುದು ಎಂಬ ಗೊಂದಲವೇ? ನಿಮಗಾಗಿಯೇ ಈ ಟಿಪ್ಸ್. ಮಳೆಗಾಲದಲ್ಲಿ ಈ ಟಿಪ್ಸ್ ಸದಾ ನಿಮ್ಮ ಜೊತೆ ಇರಲಿ.

ಬಿಸಿ ಎಣ್ಣೆ:
ಮಳೆಗಾಲದಲ್ಲಿ ಕೂದಲಿನ ಬುಡದಲ್ಲಿ ತುರಿಕೆ ಜಾಸ್ತಿ. ವಾರದಲ್ಲಿ ಮೂರು ದಿನ ಎಣ್ಣೆಯನ್ನು ಬಿಸಿ ಮಾಡಿಕೊಂಡು ಕೂಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ತುರಿಕೆ ಕಡಿಮೆ ಆಗುತ್ತದೆ.

ಶಾಂಪು ಮುಂದುವರೆಸಿ:
ನೀವು ಮಳೆಗಾಲಕ್ಕೂ ಮೊದಲು ಯಾವ ಶಾಂಪು ಬಳಸುತ್ತಿದ್ದೀರೋ ಅದನ್ನು ಮುಂದುವರೆಸಿ. ವಾರದಲ್ಲಿ ಎರಡು ದಿನ ಶಾಂಪು ಇಂದ ಸ್ನಾನ ಮಾಡಿ. ಈ ಮೂಲಕ ಕೂದಲು ಸ್ವಚ್ಛವಾಗುವುದರ ಜೊತೆಗೇ ಕೂದಲು ಅಷ್ಟು ಬೇಗಬೇಗನೇ ಒದ್ದೆಯಾಗುವ ಸಂದರ್ಭ ಇಲ್ಲವಾಗುತ್ತದೆ.

ಬಾಚಣಿಕೆ ಬದಲಿಸಿ:
ಮಳೆಗಾಲದಲ್ಲಿ ಗಾಳಿಯಲ್ಲಿರುವ ಸತತ ಆರ್ದತೆ ಕೂದಲನ್ನು ಮತ್ತು ಕೂದಲ ಬುಡವನ್ನು ಶಿಥಿಲಗೊಳಿಸಿ ಸುಲಭವಾಗಿ ತುಂಡಾಗುವಂತೆ ಅಥವಾ ಕಿತ್ತುಬರುವಂತಾಗಿಸಿರುತ್ತದೆ. ಹಾಗಾಗಿ ದೊಡ್ಡ ಹಲ್ಲಿನ ಬಾಚಣಿಕೆ ಬಳಸಿ. ಚಿಕ್ಕ ಹಲ್ಲಿನ ಬಾಚಣಿಕೆ ಕೂದಲನ್ನು ಮತ್ತಷ್ಟು ದುರ್ಬಲ ಗೊಳಿಸುತ್ತದೆ.

ಮೆಂತೆ:
ಮಳೆಗಾಲದಲ್ಲಿ ವಾತಾವರಣ ತಂಪಿರುವುದರಿಂದ ಕೂದಲಿಗೆ ಯಾವುದೇ ಪ್ಯಾಕ್ ಹಾಕಿಕೊಳ್ಳುವ ಮನಸ್ಸಾಗುವುದಿಲ್ಲ. ಆದರೆ ಕೂದಲಿನ ಆರೋಗ್ಯಕ್ಕಾಗಿ ಮೆಂತೆ ಪ್ಯಾಕ್ ಹಾಕಿಕೊಳ್ಳಲೇಬೇಕು. ಬೇಸಿಗೆಯಂತೆ ವಾರದಲ್ಲಿ ಎರಡು ದಿನ ಬೇಡ. ವಾರದಲ್ಲಿ ಒಂದು ದಿನ ಸಾಕು.

ಚೆನ್ನಾಗಿ ಒಣಗಲಿ:
ಮಳೆಗಾಲದಲ್ಲಿ ಬೇಗ ಕೂದಲು ಒಣಗುವುದಿ್ಲ. ಕೂದಲು ಒಣಗಿಲ್ಲವೆಂದು ಒದ್ದೆ ಕೂದಲನ್ನೇ ಕಟ್ಟಿಕೊಳ್ಳಬೇಡಿ. ಕೂದಲು ಸರಿಯಾಗಿ ಒಣಗದಿದ್ದರೆ ಹೊಟ್ಟು ಜಾಸ್ತಿಯಾಗಿ, ಕೂದಲು ಉದುರುವ ಸಮಸ್ಯೆ ಹೆಚ್ಚುತ್ತದೆ.

ನೀರಿನ ಪದಾರ್ಥ ಹೆಚ್ಚು ಸೇವಿಸಿ:
ಮಳೆಗಾಲದಲ್ಲಿ ಬಾಯರಿಕೆ ಕಡಿಮೆ ಎಂದು ಎಷ್ಟೋ ಜನ ನೀರನ್ನೇ ಕುಡಿಯುವುದಿಲ್ಲ. ನಿಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆ ಆದರೆ ಅದು ನೇರವಾಗಿ ಕೂದಲಿನ ಮೇಳು ಪರಿಣಾಮ ಬೀರುತ್ತದೆ. ನೀರು ಸೇವಿಸಲು ಆಗದಿದ್ದರೆ ನೀರಿನ ಪದಾರ್ಥ ಹೆಚ್ಚು ಸೇವಿಸಿ.

ಟವಲ್ ಕಟ್ಟಬೇಡಿ:
ಮಳೆಗಾಲದಲ್ಲಿ ಬೇಗ ಕೂದಲು ಒಣಗಳು ತಲೆ ಸ್ನಾನ ಮಾಡಿದ ಬಳಿಕ ಕೆಲವರು ಟವಲ್​ನಿಂದ ಕಟ್ಟುತ್ತಾರೆ. ಇದು ಒಳ್ಳೆಯ ಅಭ್ಯಾಸವಲ್ಲ. ಒದ್ದೆಯಾದ ಕೂದಲನ್ನು ಸ್ವಲ್ಪ ಒರೆಸಿ ಹಾಗೆ ಬಿಡಬೇಕು. ಒದ್ದೆಯಾಗಿರುವ ಕೂದಲಿಗೆ ಬಟ್ಟೆ ಕಟ್ಟುವುದರಿಂದ ಕೂದಲು ಉದುರುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss