ದೇಶದಲ್ಲಿ ಅಬ್ಬರಿಸುತ್ತಿದೆ ಮಾನ್ಸೂನ್‌ ಮಾರುತ: ಆಂಧ್ರ- ಛತ್ತೀಸ್‌ಗಢ ಸಂಪರ್ಕ ಕಡಿತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಮಾನ್ಸೂನ್‌ ಮಾರುತ ಅಬ್ಬರಿಸುತ್ತಿದ್ದು, ದೇಶದ 25 ರಾಜ್ಯಗಳಲ್ಲಿ ಈಗಾಗಲೇ ನಿರಂತರವಾಗಿ ಮಳೆಯಾಗುತ್ತಿದ್ದು, ಗುಜರಾತ್‌ ರಾಜ್ಯದಲ್ಲಿ ಅತೀವವಾಗಿ ಮಳೆಯಾಗುತ್ತಿದೆ.

ಕಳೆದ 24 ಗಂಟೆಯಲ್ಲಿ ಪ್ರವಾಹ ಹಾಗೂ ನಿರಂತರ ಮಳೆಯಲ್ಲಿ ಮತ್ತೆ 7 ಮಂದಿ ಸಾವಿಗೀಡಾಗಿದ್ದು, ಕಳೆದ ಎರಡು ದಿನಗಳಲ್ಲಿ ಗುಜರಾತ್‌ನಲ್ಲಿ ಒಟ್ಟಾರೆ 65 ಮಂದಿ ಸಾವು ಕಂಡಿದ್ದಾರೆ.

ಭಾನುವಾರ ರಾತ್ರಿಯ ಸಮಯವೊಂದರಲ್ಲೇ ಅಹಮದಾಬಾದ್‌ನಲ್ಲಿ 219ಮಿಲಿಮೀಟರ್‌ ಮಳೆಯಾಗಿದೆ. ಸೂರತ್‌ ಸೇರಿದಂತೆ 6 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳು ಸೋಮವಾರ ಸಾಕಷ್ಟು ಮಳೆ ಕಂಡಿವೆ. ಮಧ್ಯಪ್ರದೇಶದ ಭೋಪಾಲ್‌, ಇಂದೋರ್‌ ಹಾಗೂ ಜಬಲ್ಪುರ ಸೇರಿದಂತೆ 33 ಜಿಲ್ಲೆಗಳಿಗೆ ಹವಮಾನ ಇಲಾಖೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಬಿಹಾರ, ಜಾರ್ಖಂಡ್‌, ಉತ್ತರ ಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯಲಿದೆ ಎನ್ನಲಾಗಿದೆ.

ಆಂಧ್ರ- ಛತ್ತೀಸ್‌ಗಢ ಸಂಪರ್ಕ ಕಡಿತ
ಇನ್ನು ಮುಂಬೈನಲ್ಲಿ ಭಾರೀ ಮಳೆಯ ಕಾರಣದಿಂದಾಗಿ ಸಮುದ್ರತೀರದ ಬೃಹದಾಕಾರದ ಅಲೆಗಳು ದಡಕ್ಕೆ ಅಪ್ಪಳಿಸಿವೆ. ಇನ್ನೂ ಛತ್ತೀಸ್‌ಗಢದಲ್ಲೂ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದಾಗಿ ಆಂಧ್ರಪ್ರದೇಶ ಹಾಗೂ ಛತ್ತೀಸ್‌ಗಢ ನಡುವಿನ ಸಂಪರ್ಕ ಕಡಿತಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!