Thursday, August 18, 2022

Latest Posts

ಮೂಡಿಗೆರೆ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಎ.ವಿ.ಸ್ವಾಮಿಗೆ ‘ಅತ್ಯುತಮ ಮೀನುಗಾರಿಕಾ ವಿಜ್ಞಾನಿ’ ಪ್ರಶಸ್ತಿ

ಹೊಸ ದಿಗಂತ ವರದಿ, ಚಿಕ್ಕಮಗಳೂರು :

ಮೂಡಿಗೆರೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಎ.ವಿ.ಸ್ವಾಮಿ ಅವರಿಗೆ ಅತ್ಯುತಮ ಮೀನುಗಾರಿಕಾ ವಿಜ್ಞಾನಿ ಪ್ರಶಸ್ತಿ ಲಭಿಸಿದೆ.
ಉತ್ತರ ಪ್ರದೇಶದಲ್ಲಿ ಇತ್ತಿಚ್ಚೆಗೆ ನಡೆದ ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಸ್ವಾಮಿ ಅವರು ಮಂಡಿಸಿದ ಪ್ರಭಂದಕ್ಕೆ ಆಗ್ರೋ ಎನ್ವೈರ್ನಮೆಂಟಲ್ ಡೆವಲಪ್‍ಮೆಂಟ್ ಸೊಸೈಟಿ (ಎಇಡಿಎಸ್) ಸಂಸ್ಥೆಯು ಈ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಕುರಿತು ಮಾತನಾಡಿದ ಸ್ವಾಮಿ, ನಾವು ಮಲೆನಾಡು ಭಾಗದಲ್ಲಿ ಸುಮಾರು 20 ವರ್ಷಗಳಿಂದ ಸಲ್ಲಿಸಿರುವ ಸೇವಾ ಕಾರ್ಯಕ್ಕೆ ಹಾಗೂ ಶಿವಮೊಗ್ಗ ತೋಟಗಾರಿಕಾ ವಿಶ್ವವಿದ್ಯಾಲಯ, ಮತ್ತು ಮೂಡಿಗೆರೆ ತೋಟಗಾರಿಕೆ ಸಂಶೋಧನಾ ಕೇಂದ್ರಗಳಿಗೆ ಸಂದ ಗೌರವವಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ, ಮೀನುಗಾರಿಕೆ ಕ್ಷೇತ್ರಗಳಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಉತ್ತಮ ಪೆÇ್ರತ್ಸಾಹ ನೀಡುತ್ತಿದೆ. 2020ರಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದಾ ಯೋಜನೆ ಎಂಬ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಈಗಾಗಲೆ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಮೀನುಗಾರಿಕಗೆ ಹಲವಾರು ರೀತಿಯ ಯೋಜನೆಗಳು ಇದ್ದು, ಮೀನು ಮರಿ ಸಾಕಣೆ ಉದ್ಯಮಕ್ಕೆ ಸಬ್ಸಿಡಿ ಸಹಿತ ಸಾಲ ಸೌಲಭ್ಯ ಹಾಗೂ ಇದಕ್ಕೆ ಸಂಬಂದಿಸಿದ್ದಂತೆ ಮಾರ್ಗದರ್ಶನ, ನೀರು ಪರಿಶಿಲನೆ ಸೇರಿ ಹತ್ತು ಹಲವಾರು ಯೋಜನೆಗಳಿದ್ದು ಜನತೆ ಬಳಸಿಕೊಳ್ಳಬಹುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!