Wednesday, August 17, 2022

Latest Posts

ಶಿವರಾತ್ರಿ ಪ್ರಸಾದ ಸೇವಿಸಿ 120ಕ್ಕೂ ಹೆಚ್ಚು ಜನ ಅಸ್ವಸ್ಥ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಶಿವರಾತ್ರಿ ಹಿನ್ನೆಲೆಯಲ್ಲಿ ಪ್ರಸಾದ ಸೇವಿಸಿದ ನಂತರ 120ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ರಾಜಸ್ಥಾನದ ಡುಂಗರಪುರ ಜಿಲ್ಲೆಯ ಖಲೀಲ್ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.

ಪ್ರಸಾದ ಸೇವಿಸಿದ ನಂತರ ಹೊಟ್ಟೆನೋವು, ವಾಂತಿ, ಭೇದಿ ಪ್ರಾರಂಭವಾಗಿದೆ. ಕೂಡಲೇ ಜಿಲ್ಲಾ ಕೇಂದ್ರಕ್ಕೆ ಮಾಹಿತಿ ತಿಳಿಸಿದ್ದು,  ಪೂನ್‌ಪುರ ಮತ್ತು ಬಂಕೋಡ ಆರೋಗ್ಯ ಕೇಂದ್ರಗಳ ವೈದ್ಯಕೀಯ ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿ, ಚಿಕಿತ್ಸೆ ನೀಡಿದ್ದಾರೆ.

ಕೆಲವು ಭಕ್ತಾದಿಗಳ ಆರೋಗ್ಯ ಗಂಭೀರ ಸ್ಥಿತಿ ತಲುಪಿದ್ದರಿಂದ ಅವರನ್ನು ಆ್ಯಂಬುಲೆನ್ಸ್​​​​​ ಮೂಲಕ ಡುಂಗರಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವರಾತ್ರಿಯ ಪ್ರಯುಕ್ತ ಸಾಗೋ ಖಿಚ್ಡಿ ಮತ್ತು ಮಜ್ಜಿಗೆಯ ಪ್ರಸಾದವನ್ನು ವಿತರಿಸಲಾಗಿತ್ತು. ಇದೀಗ ಖಿಚ್ಡಿ ಮತ್ತು ಮಜ್ಜಿಗೆಯ ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ವರದಿ ಬಂದ ಮೇಲೆಯೇ ನಿಖರ ಕಾರಣ ತಿಳಿಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!