ವೇಲುಗೋಡು ಜಲಾಶಯದಲ್ಲಿ 150ಕ್ಕೂ ಹೆಚ್ಚು ಗೋವುಗಳ ನಾಪತ್ತೆ: ಆತಂಕದಲ್ಲಿ ಮಾಲೀಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವೇಲುಗೋಡು ಜಲಾಶಯದಲ್ಲಿ ನಾಪತ್ತೆಯಾಗಿರುವ 150 ಹೆಚ್ಚು ಹಸುಗಳು ಇನ್ನೂ ಪತ್ತೆಯಾಗಿಲ್ಲ. ರಾತ್ರಿ ವೇಳೆ ಜಲಾಶಯದಲ್ಲಿ ಮೊಸಳೆಗಳು ಓಡಾಡುವ ಸಾಧ್ಯತೆ ಇರುವುದರಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದ್ದು, ಬೆಳ್ಳಂಬೆಳಗ್ಗೆಯೇ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ನಿನ್ನೆ ವೇಲುಗೊಂಡ ಡ್ಯಾಂ ವ್ಯಾಪ್ತಿಯ ಗ್ರಾಮಗಳ ಜನರು 500ಕ್ಕೂ ಹೆಚ್ಚು ಹಸುಗಳನ್ನು ಮೇಯಲು ಬಿಟ್ಟಿದ್ದರಂತೆ. ಇದೇ ವೇಳೆ ಕಾಡುಹಂದಿಗಳ ಹಿಂಡು ಹಸುಗಳನ್ನು ಅಟ್ಟಿಸಿಕೊಂಡು ಬಂದಿದ್ದರಿಂದ ಹಸುಗಳು ನೀರೊಳಗೆ ಇಳಿದಿವೆ.

ದನಕರುಗಳು ಡ್ಯಾಂನ ಮಧ್ಯಭಾಗಕ್ಕೆ ತೆರಳುತ್ತಿರುವುದನ್ನು ಗಮನಿಸಿದ ಮಾಲೀಕರು ಸ್ಥಳೀಯ ಮೀನುಗಾರರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವೇಗದ ದೋಣಿಗಳು ಮತ್ತು ತೆಪ್ಪಗಳೊಂದಿಗೆ ದನಗಳನ್ನು ಹಿಂಬಾಲಿಸಿ ಸುಮಾರು 350 ಹಸುಗಳನ್ನು ದಡ ಸೇರಿಸಿದ್ದಾರೆ.

150ಕ್ಕೂ ಹೆಚ್ಚು ಹಸುಗಳು ಪತ್ತೆಯಾಗದ ಕಾರಣ ಮೀನುಗಾರರು ಮತ್ತೆ ಹುಡುಕಾಟ ಆರಂಭಿಸಿದ್ದಾರೆ. ಡ್ಯಾಂನ ಆಳಕ್ಕೆ ಹಸುಗಳು ಹೋಗಿದ್ದರೆ ಅವು ಬದುಕುಳಿದಿರುವುದು ಕಷ್ಟ ಅಂತಿದಾರೆ ಮೀನುಗಾರರು. ಬೆಳಗ್ಗೆಯಿಂದಲೇ ಮೀನುಗಾರರ ನೆರವಿನಿಂದ ಗೋರಕ್ಷಕರು ಹಾಗೂ ಮಾಲೀಕರು ಕಾರ್ಯಪ್ರವೃತ್ತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!