ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

3,000ಕ್ಕೂ ಹೆಚ್ಚು ಕನ್ನಡೇತರ ಸಹೋದ್ಯೋಗಿಗಳಿಗೆ ಕನ್ನಡ ಕಲಿಸಿದ್ರು ಈ ‘ಐಟಿ’ ಮೇಸ್ಟ್ರು!

  • ಕಾವ್ಯಾ ಜಕ್ಕೊಳ್ಳಿ

ಕೆಲಸ ಮುಗಿದ ಮೇಲೂ ಒಂದು ಗಂಟೆ ಕಾದು ಕನ್ನಡ ಕ್ಲಾಸಿಗೆ ಹಾಜರಾಗುವ ಕನ್ನಡೇತರ  ಅಂತಾರಾಷ್ಟ್ರೀಯ ಐಟಿ ಉದ್ಯೋಗಿಗಳು ಒಂದೆಡೆಯಾದರೆ, ಅವರ ಆಸಕ್ತಿಯನ್ನು ಪೋಷಿಸುತ್ತಾ, ತಮ್ಮ ಬ್ಯುಸಿ ಲೈಫಿನ ನಡುವೆಯೂ ಸರಳವಾಗಿ ಕನ್ನಡ ಕಲಿಸಲು ಮುಂದಾದ ಮಧುಚಂದ್ರ ಹೆಚ್‌ಬಿ ಕನ್ನಡ ಪ್ರೇಮ ನೋಡಿದರೆ ಅಧ್ಬುತ ಎನಿಸುತ್ತದೆ.

ಮಧುಚಂದ್ರ ಹೆಚ್‌ಬಿ ಮೂಲತಃ ಕರ್ನಾಟಕದ ಭದ್ರಾವತಿಯವರು. ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಐಟಿ ಕಂಪನಿಯಲ್ಲಿ ಸಾಪ್ಟವೇರ್ ಇಂಜಿನೀಯರ್ ಆಗಿ ವೃತಿ ನಿರ್ವಹಿಸುತ್ತಿದ್ದಾರೆ. ಇವರ ಬಹುದೊಡ್ಡ ಆಸಕ್ತಿ, ಪ್ರೀತಿ, ಆಕಾಂಕ್ಷೆ ಎಂದರೆ ತಾವು ಕೆಲಸ ಮಾಡುವ ಕಂಪನಿಯ ಸಹೋದ್ಯೋಗಿಗಳಿಗೆ ಕನ್ನಡ ಕಲಿಸುವುದು.

3೦೦೦ ಜನರ ಧ್ವನಿಯಲ್ಲಿ ಕನ್ನಡ ಕಂಪು..

2010ರಿಂದ ಪ್ರಾರಂಭವಾದ ಮಧುಚಂದ್ರ ಅವರ ಕನ್ನಡ ಸೇವೆ ಇಲ್ಲಿಯವರೆಗೂ ನಿರಂತರವಾಗಿ ಮುಂದುವರೆದಿದೆ. 10 ವರ್ಷಗಳಲ್ಲಿ ಸುಮಾರು 3,000 ಜನರಿಗೆ ಕನ್ನಡ ಮಾತನಾಡಲು ಕಲಿಸಿದ್ದಾರೆ.

‘ಕಲಿಯುವವರಿಗಿಂತ ಕಲಿಸುವವರಿಗೆ ಹೆಚ್ಚು ಆಸಕ್ತಿ ಇರಬೇಕು”.

‘ನನಗೆ ಈ ಕೆಲಸದಲ್ಲಿ ಬಹಳ ಖುಷಿ ಇದೆ. ಎಲ್ಲೆಡೆ ಕನ್ನಡ ಮಾತನಾಡುವವರೇ ಕಡಿಮೆ ಎಂಬ ಆರೋಪ ಕೇಳಿ ಬರುತ್ತದೆ.  ಆದರೆ ಕನ್ನಡ ಮಾತನಾಡುವವರ ಜೊತೆ ಕನ್ನಡ ಕಲಿಸುವವರ ಸಂಖ್ಯೆ ಕೂಡ ಕಡಿಮೆ ಆಗಿದೆ. ಕಲಿಯುವವರಿಗಿಂತ ಕಲಿಸುವವರಿಗೆ ಹೆಚ್ಚು ಆಸಕ್ತಿ ಇರಬೇಕು’ ಎನ್ನುತ್ತಾರೆ ಮಧುಚಂದ್ರ.

1 ಗಂಟೆಯ ಕ್ಲಾಸ್…

ಕಂಪನಿಯ ಕೆಲಸ ಮುಗಿದ ನಂತರ 1 ಗಂಟೆಯ ಕನ್ನಡ ಕ್ಲಾಸ್ ಪ್ರಾರಂಭವಾಗುತ್ತದೆ. ಒಟ್ಟು 10 ಕ್ಲಾಸ್ ಗಳ ಕನ್ನಡ ಕೋರ್ಸ್‌ನಲ್ಲಿ ಸುಮಾರು 25 ರಿಂದ 3೦ ಜನರಿರುತ್ತಾರೆ. ಎಲ್ಲರಿಗೂ ಅರ್ಥವಾಗುವಂತೆ ಪಠ್ಯ ಕ್ರಮವನ್ನು ಮಧುಚಂದ್ರ ಸಿದ್ಧಪಡಿಸಿಕೊಂಡಿದ್ದಾರೆ. ಕೇವಲ 15 ನಿಮಿಷ ಮಾತ್ರ  ಬೋಧಿಸುತ್ತಾರೆ, ಇನ್ನುಳಿದ 45 ನಿಮಿಷವನ್ನು ವಿದ್ಯಾರ್ಥಿಗಳೊಂದಿಗೆ ಹೊಸ ವಿಷಯದ ಕುರಿತು ಚರ್ಚೆ ನಡೆಸುತ್ತಾರೆ.

‘ಕನ್ನಡದ ಜೊತೆ ಕರ್ನಾಟಕವನ್ನೂ ಕನೆಕ್ಟ್ ಮಾಡ್ತೀವಿ’

‘ನಾವು ಕನ್ನಡ ಭಾಷೆ ಕಲಿಸುತ್ತ ಕರ್ನಾಟಕವನ್ನೂ ಕನೆಕ್ಟ್ ಮಾಡ್ತೀವಿ. ನಾನು, ನಮ್ಮದು ದಿಂದ ಶುರುವಾಗುವ ಕಲಿಕೆ ವ್ಯಾಕರಣ, ವಾಕ್ಯ ರಚನೆ, ಅಂಕಿ ಸಂಖ್ಯೆ, ಲಿಂಗಗಳು, ದಿಕ್ಕು, ಸಮಯದತ್ತ ಸಾಗಿ ಕಾಲಗಳನ್ನು ಹೇಳಿಕೊಡುವಲ್ಲಿಗೆ ಕೊನೆಗೊಳ್ಳುತ್ತದೆ’.

ಕಲಿಕೆ ಪ್ರಾಯೋಗಿಕವಾಗಿರಲೆಂದು ದಿನವೂ ನಾವು ಬಳಸುವ ವಾಕ್ಯಗಳನ್ನು ಹಾಗೂ ಇನ್ನೊಬ್ಬರೊಂದಿಗಿನ ಸಂಭಾಷಣೆಯನ್ನು ಕನ್ನಡದಲ್ಲಿ ಹೇಗೆ ಹೇಳುತ್ತಾರೆ ಎಂಬುದನ್ನು ತಿಳಿಸುತ್ತಾರೆ. ಇದು ವಿದ್ಯಾರ್ಥಿಗಳಿಗೆ ಬಹಳ ಕನೆಕ್ಟ್ ಆಗುತ್ತದೆ. ಬೇಗ ಕನ್ನಡ ಕಲಿಯಲು ಸಹಾಯವಾಗುತ್ತದೆ.

ಹೇಗೆ ತರಗತಿ ಪ್ರಾರಂಭವಾಗುತ್ತದೆ..

ಕನ್ನಡ ಕ್ಲಾಸ್ ಶುರುಮಾಡುವ ಮೊದಲು ಕಂಪನಿ ಎಚ್ ಆರ್ ಅವರಿಂದ ಅನುಮತಿ ಪಡೆದು ಎಲ್ಲ ಸಹೋದ್ಯೋಗಿಗಳಿಗೂ ಮಿಂಚಂಚೆ ಕಳಿಸಲಾಗುತ್ತದೆ. ಆಸಕ್ತರು ಹೆಸರು ನೋಂದಾಯಿಸುತ್ತಾರೆ. ಹೀಗೆ 25-30 ಜನರ ಬ್ಯಾಚ್ ಮಾಡಲಾಗುತ್ತದೆ. ತಮ್ಮದೇ ವಯಸ್ಸಿನ ಮೂರ್ನಾಲ್ಕು ಜನರನ್ನು ಸೇರಿಸಿಕೊಂಡು ಕನ್ನಡ ಕಲಿಕೆ ಪ್ರಾರಂಭ ಮಾಡುತ್ತಾರೆ.

“ಕೆಲಸ ಮುಗಿದ ಮೇಲೆ 1 ಗಂಟೆ ಕನ್ನಡ ಪಾಠ ಮಾಡಿದರೆ, ರಿಲ್ಯಾಕ್ಸ್ ಎನಿಸುತ್ತದೆ. ನನ್ನ ಕನ್ನಡ ಪ್ರೇಮ ಎಂದಿಗೂ ಮುಗಿಯುವುದಿಲ್ಲ ಎನ್ನುತ್ತಾರೆ ಮಧುಚಂದ್ರ”

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss