ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಇಂದು ಜರ್ಮನಿ ಹಾಗೂ ಯುಕೆಯಿಂದ ಸುಮಾರು 450ಕ್ಕೂ ಆಕ್ಸಿಜನ್ ಗಳನ್ನು ಭಾರತಕ್ಕೆ ಏರ್ ಲಿಫ್ಟ್ ಮಾಡಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ವಾಯುನೆಲೆ, ಸಿ.17ಎಸ್ ವಿಮಾನವು ಜರ್ಮನಿಯ ಫ್ರಾಂಕ್ ಫರ್ಟ್ ನಿಂದ 4 ಕ್ರಿಯೀಜೆನಿಕ್ ಆಕ್ಸಿಜನ್ ಗಳನ್ನು ತರಲಿದ್ದು, ಯುಕೆ ಯಿಂದ 450 ಆಕ್ಸಿಜನ್ ಸಿಲಿಂಡರ್ ಗಳನ್ನು ತರಲಾಗುತ್ತಿದೆ. ಇವುಗಳನ್ನು ದೆಹಲಿ ಹಾಗೂ ತಮಿಳುನಾಡು ವಾಯುನೆಲೆಗೆ ಏರ್ ಲಿಫ್ ಮಾಡಲಾಗುತ್ತದೆ ಎಂದು ತಿಳಿಸಿದೆ.
ಕೋವಿಡ್ ಸೋಂಕಿನಿಂದ ಪಾರಾಗಲೂ ಭಾರತಕ್ಕೆ ಜಗತ್ತಿನ ಅನೇಕ ರಾಷ್ಟ್ರಗಳು ಬೆಂಬಲ ಸೂಚಿಸಿದ್ದು, ಇತ್ತೀಚಿಗಷ್ಟೆ ದುಬೈ, ಸಿಂಗಪೂರ್, ಐರ್ಲ್ಯಾಂಡ್ ರಾಷ್ಟ್ರಗಳು ಆಕ್ಸಿಜನ್ ಟ್ಯಾಂಕರ್ ಕಳುಹಿಸಿದೆ.