ಕ್ವಾಲಿಟಿ ಟೆಸ್ಟ್​ನಲ್ಲಿ 50ಕ್ಕೂ ಹೆಚ್ಚು ಔಷಧಿಗಳು ಫೇಲ್: ಬಳಸುವ ಮುನ್ನ ಎಚ್ಚರ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತದ ಔಷಧ ನಿಯಂತ್ರಕ ನಡೆಸಿದ ಗುಣಮಟ್ಟದ ಪರೀಕ್ಷೆಗಳಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ವಿಟಮಿನ್‌ಗಳು, ಕ್ಯಾಲ್ಸಿಯಂ ಡಿ3 ಸಪ್ಲಿಮೆಂಟ್ಸ್, ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಆಸಿಡ್ ರಿಫ್ಲಕ್ಸ್ ಸೇರಿದಂತೆ 50ಕ್ಕೂ ಹೆಚ್ಚು ಔಷಧಗಳು ಗುಣಮಟ್ಟ ಸಾಬೀತುಪಡಿಸುವಲ್ಲಿ ವಿಫಲವಾಗಿದೆ.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್(CDSCO) ಕಳೆದ ಆಗಸ್ಟ್‌ನಲ್ಲಿ ‘ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ’ (NSQ) ಎಚ್ಚರಿಕೆಯನ್ನು ನೀಡಿತ್ತು. ಅಲ್ಕೆಮ್ ಲ್ಯಾಬೊರೇಟರೀಸ್, ಹೆಟೆರೊ ಡ್ರಗ್ಸ್, ಹಿಂದೂಸ್ತಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್(HAL), ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಸೇರಿದಂತೆ ಕೆಲವು ಹೆಚ್ಚು ಮಾರಾಟವಾದ ಔಷಧಿಗಳನ್ನು ಪ್ರಸಿದ್ಧ ಔಷಧಿ ಕಂಪನಿಗಳು ಉತ್ಪಾದಿಸಿವೆ ಎಂದು ತಿಳಿಸಿತ್ತು.

NSQ ಎಂದು ಗುರುತಿಸಲಾದ ಔಷಧಿಗಳಲ್ಲಿ ಪ್ಯಾರಸಿಟಮಾಲ್ ಮಾತ್ರೆಗಳು(500 mg), ಮಧುಮೇಹ ವಿರೋಧಿ ಔಷಧ ಗ್ಲಿಮೆಪಿರೈಡ್, ಅಧಿಕ ರಕ್ತದೊತ್ತಡ ಔಷಧಿ ಟೆಲ್ಮಾ H(ಟೆಲ್ಮಿಸಾರ್ಟನ್ 40 mg), ಆಸಿಡ್ ರಿಫ್ಲಕ್ಸ್ ಔಷಧಿ ಪ್ಯಾನ್ ಡಿ, ಮತ್ತು ಕ್ಯಾಲ್ಸಿಯಂ ಪೂರಕಗಳಾದ ಶೆಲ್ಕಾಲ್ C ಮತ್ತು D3 ಸೇರಿವೆ. ಈ ಪಟ್ಟಿಯಲ್ಲಿ ವ್ಯಾಪಕವಾಗಿ ಬಳಸಲಾಗುವ HAL ತಯಾರಿಸುವ ಆಂಟಿಬಯೋಟಿಕ್ ಮೆಟ್ರೋನಿಡಜೋಲ್ ಸಹ ಇದೆ.

ಅಲ್ಕೆಮ್ ಹೆಲ್ತ್ ಸೈನ್ಸ್‌ನ ಆ್ಯಂಟಿಬಯೋಟಿಕ್ಸ್, ಕ್ಲಾವಮ್ 625 ಮತ್ತು ಪ್ಯಾನ್ ಡಿ ಸಹ ಕಳಪೆ ಗುಣಮಟ್ಟದ್ದಾಗಿದೆ ಎಂದು ಕೋಲ್ಕತ್ತಾ ರಾಜ್ಯ-ಚಾಲಿತ ಪ್ರಯೋಗಾಲಯ ಗುರುತಿಸಿದೆ. ಮಕ್ಕಳಲ್ಲಿ ತೀವ್ರವಾದ ಬ್ಯಾಕ್ಟೀರಿಯಾದ ಸೋಂಕಿಗೆ ಸೂಚಿಸಲಾಗುವ, ಹೈದರಾಬಾದ್ ಮೂಲದ ಹೆಟೆರೊದ ಸೆಪೊಡೆಮ್ ಎಕ್ಸ್‌ಪಿ 50 ಡ್ರೈ ಕಳಪೆ ಗುಣಮಟ್ಟದ್ದಾಗಿದೆ ಎಂದು ಲ್ಯಾಬ್ ಹೇಳಿದೆ.

ಅದೇ ರೀತಿ ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ ಪ್ಯಾರಸಿಟಮಾಲ್ ಮಾತ್ರೆಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ. ಹೆಚ್ಚುವರಿಯಾಗಿ, ಪಿತ್ತ ಕರಗಿಸಲು ಸಿದ್ಧಪಡಿಸಲಾದ ಸನ್ ಫಾರ್ಮಾ ಲ್ಯಾಬೊರೇಟರೀಸ್ ಲಿಮಿಟೆಡ್‌ನ ಉರ್ಸೊಕಾಲ್ 300 ಅನ್ನು ನಕಲಿ ಎಂದು ಫ್ಲ್ಯಾಗ್ ಮಾಡಲಾಗಿದೆ.

ಹರಿದ್ವಾರದಲ್ಲಿ ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬ್ ತಯಾರಿಸಿದ ಟೆಲ್ಮಿಸಾರ್ಟನ್‌ನ ಹಲವು ಬ್ಯಾಚ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!