Tuesday, August 9, 2022

Latest Posts

50ಕ್ಕೂ ಹೆಚ್ಚು ಕಲಿಕಾ ಆಪ್‌ಗಳ ಅಭಿವೃದ್ಧಿಪಡಿಸಿದ ಶಿಕ್ಷಕನಿಗೆ ಒಲಿದು ಬಂತು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಕ್ಕಳಿಗಾಗಿ 51 ಕಲಿಕಾ ಆಪ್‌ಗಳನ್ನು ರಚಿಸಿದ ಮಹಾರಾಷ್ಟ್ರದ ಮರಾಠವಾಡದ ಉಸ್ಮಾನಾಬಾದ್ ಜಿಲ್ಲೆಯ 34 ವರ್ಷದ ಶಿಕ್ಷಕ ಉಮೇಶ್ ಖೋಸ್ ಅವರಿಗೆ ಈ ಬಾರಿಯ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾನುವಾರ ಶಿಕ್ಷಕರ ದಿನಾಚರಣೆಯ ಪ್ರಯುಕ್ತ 44 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪ್ರದಾನ ಮಾಡಿದರು.
ಮಹಾರಾಷ್ಟ್ರ ಶಿಕ್ಷಣ ಸಚಿವೆ ವರ್ಷಾ ಗಾಯಕವಾಡ್ ಈ ಹಿಂದೆ ಉಮೇಶ್ ಖೋಸ್ ಅವರ ಸಾಧನೆಯ ಬಗ್ಗೆ ಟ್ವೀಟ್ ಮಾಡಿದ್ದರು. ಔಪಚಾರಿಕ ತಾಂತ್ರಿಕ ಶಿಕ್ಷಣವಿಲ್ಲದೆ 50 ಕ್ಕೂ ಹೆಚ್ಚು ಆಪ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ ಉಮೇಶ್ ಖೋಸ್, ಕಲೆ ಮತ್ತು ಶಿಕ್ಷಕರ ಶಿಕ್ಷಣದಲ್ಲಿ ಔಪಚಾರಿಕ ಪದವಿಗಳನ್ನು ಹೊಂದಿದ್ದರೂ ತಂತ್ರಜ್ಞಾನದ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಆದಾಗ್ಯೂ ಯೂಟ್ಯೂಬ್ ಮತ್ತು ಗೂಗಲ್ ಮೂಲಕ ಮೊಬೈಲ್ ಆಪ್‌ ಗಳನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂದು ಸ್ವತಃ ಕಲಿತುಕೊಂಡಿದ್ದಾರೆ.
ಅವರು 51 ಕಲಿಕಾ ಅಪ್ಲಿಕೇಶನ್‌ಗಳು, ಗೇಮ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವರ ತಂತ್ರಜ್ಞಾನದ ವ್ಯಾಪಕ ಬಳಕೆಯು ಎರಡು ಜಿಲ್ಲಾ ಪರಿಷತ್ ಶಾಲೆಗಳ ಪರಿವರ್ತನೆಗೆ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss