ಫಿಫಾ ವಿಶ್ವಕಪ್ ಬಗ್ಗೆ ನೂರು ಕೋಟಿಗೂ ಅಧಿಕ ಮಂದಿ ಒಟ್ಟಿಗೇ ಗೂಗಲ್ ಮಾಡಿದ್ರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೂಗಲ್‌ನ ಇತಿಹಾಸದಲ್ಲೇ ಇದೇ ಮೊದಲು, 100 ಕೋಟಿಗೂ ಅಧಿಕ ಮಂದಿ ಫಿಫಾ ವಲ್ಡ್‌ಕಪ್ ಬಗ್ಗೆ ಗೂಗಲ್ ಮಾಡಿದ್ದಾರೆ.

ಈ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ಟ್ವೀಟ್ ಮಾಡಿದ್ದು, 25 ವರ್ಷದಲ್ಲೇ ಅತ್ಯಧಿಕ ದಟ್ಟಣೆ ದಾಖಲಾಗಿದೆ. ಯಾವ ರೀತಿ ಎಂದರೆ ಇಡೀ ಜಗತ್ತು ಒಂದೇ ವಿಷಯದ ಬಗ್ಗೆ ಹುಡುಕಾಟ ನಡೆಸಿದಂತೆ ಕಾಣುತ್ತಿದೆ ಎಂದಿದ್ದಾರೆ.

100 ಕೋಟಿ ಜನರು ಒಂದೇ ವಿಷಯ ಹುಡುಕಾಡಿದ್ದು, ಗೂಗಲ್‌ನಲ್ಲಿ ಟ್ರಾಫಿಕ್ ಉಂಟುಮಾಡಿದೆ. ಸುಂದರ್ ಪಿಚೈ ಅವರ ಟ್ವೀಟ್‌ಗೆ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದು, ಖುಷಿ ವಿಷಯ ಎಂದು ಅಭಿಮಾನಿಗಳು ಹೇಳಿದ್ದಾರೆ. ಒಂದು ಬಿಲಿಯನ್‌ಗಿಂತಲೂ ಹೆಚ್ಚು ಮಂದಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!