Wednesday, June 29, 2022

Latest Posts

ಬಲವಂತದ ಮತಾಂತರದ ವೇಳೆ ಹಿಂಜಾವೇ ದಾಳಿ: ಮತಾಂತರಿಸುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

ದಿಗಂತ ವರದಿ ಮಡಿಕೇರಿ:

ಮನೆಯೊಂದರಲ್ಲಿ ಗಿರಿಜನರನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರಿಸುತ್ತಿದ್ದ ವೇಳೆ ದಾಳಿ‌ ನಡೆಸಿದ‌ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮತಾಂತರ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರಪೇಟೆ ತಾಲೂಕಿನ ಮಾಲಂಬಿಯಲ್ಲಿ ನಡೆದಿದೆ.

ಮಾಲಂಬಿ ಗ್ರಾಮದ ಮನೆಯೊಂದರಲ್ಲಿ ಬಾಗಿಲುಗಳನ್ನು ಮುಚ್ಚಿಕೊಂಡು ಯಾರಿಗೂ ಕಾಣದಂತೆ ಗೌಪ್ಯವಾಗಿ ಸ್ಥಳೀಯ ಗಿರಿಜನರನ್ನು ಮತಾಂತರಿಸುತ್ತಿದ್ದ ವೇಳೆ ದಾಳಿ ನಡೆಸಿದ ಹಿಂಜಾವೇ ಕಾರ್ಯಕರ್ತರು, ಬಲವಂತದ ಮತಾಂತರ ನಡೆಸುತ್ತಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಸಂದರ್ಭ ಮತಾಂತರಕ್ಕೆ ಬಳಸುತ್ತಿದ್ದ ಪುಸ್ತಕಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮತಾಂತರಕ್ಕೆ ಸಂಬಂಧಿಸಿ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss