ಹೊಸದಿಗಂತ ವರದಿ, ಹಾಸನ:
ಹಾಸನ ಹೊರವಲಯದ ಬೂವನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ತಾಯಿ ಸೇರಿದಂತೆ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಮೀಪದ ಗವೇನಹಳ್ಳಿಯ ನಿವಾಸಿ ಶಿವಾನಂದ್ ಎಂಬುವವರು ಭಾನುವಾರ ರಾತ್ರಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು, ಪತ್ನಿ ಜ್ಯೋತಿ(32), ಮಕ್ಕಳಾದ ಪ್ರಣತಿ (3), ಪ್ರಣವ್(3) ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಎರಡು ಮಕ್ಕಳು ಸ್ಥಳದಲ್ಲೆ ಮೃತಪಟ್ಟಿದ್ದು, ಜ್ಯೋತಿ ನಗರದ ಖಾಸಗೀ ನಸಿ೯ಂಗ್ ಹೋಂ ಒಂದರಲ್ಲಿ ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಶಿವಾನಂದ್ ಗೆ ಚಿಕಿತ್ಸೆ ಮುಂದುವರೆದಿದೆ.
ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿದ ಚಾಲಕ ನಾಲ್ಕು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿ ಹೊಡೆದ ಬಳಿಕ ಬೈಕುಗಳನ್ನು ಸುಮಾರು ಎರಡು ಕಿಲೋ ಮೀಟರ್ ದೂರದವರೆಗೆ ಲಾರಿ ಎಳೆದುಕೊಂಡು ಹೋಗಿದ್ದು,
ಲಾರಿಯ ಟಯರ್ ನಡಿ ಸಿಲುಕಿ ಮೂರು ಕಿಲೋಮೀಟರ್ ದೂರ ಮಗುವಿನ ಮೃತದೇಹ ಹೋಗಿದೆ. ಡಿಕ್ಕಿ ರಭಸಕ್ಕೆ ಮಕ್ಕಳ ದೇಹ ಸಂಪೂರ್ಣ ಚೆಲ್ಲಾಪಿಲ್ಲಿಯಾಗಿದೆ.