ಸಾಲದ ಸಂಕಷ್ಟಕ್ಕೆ ತಾಯಿ-ಮಗಳು ಬಲಿ: ಇಬ್ಬರು ಮಕ್ಕಳ ಸ್ಥಿತಿ ಗಂಭೀರ
ಹೊಸದಿಗಂತ ವರದಿ ಧಾರವಾಡ: ಸಾಲಬಾಧೆ ತಾಳದೆ, ತಾಯಿ ತನ್ನ ಮೂರು ಮಕ್ಕಳಿಗೆ ವಿಷ ನೀಡಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಶನಿವಾರ ನಡೆದಿದೆ. ಮೃತರನ್ನು ಸವಿತಾ ಕುರಗುಂದ (38) ಮತ್ತು ಗದಿಗೆವ್ವ ಕುರಗುಂದ (8) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಭಾಗ್ಯಶ್ರೀ (6) ಹಾಗೂ ಹರ್ಷಿತಾ (9) ಎಂಬ ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
Copy and paste this URL into your WordPress site to embed
Copy and paste this code into your site to embed