ಹೊಸದಿಗಂತ ಡಿಜಿಟಲ್ ಡೆಸ್ಕ್:
ಅವಳಿ ಮಕ್ಕಳ ಕಾಟವನ್ನು ತಾಳಲಾರದೆ ತಾಯಿ ಮದ್ದು ನೀಡಿ ಮಕ್ಕಳನ್ನು ಕೊಂದಿದ್ದಾಳೆ. ಜೊತೆಗೆ ತಾನೂ ಅದೇ ಮದ್ದನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಒಂದು ಕಾಲು ವರ್ಷದ ಪೂರ್ವಿತ್ ಹಾಗೂ ಪೂರ್ವಾಂಶ್ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಾಯಿ ರೇಖಾ ಕೂಡ ಕೊನೆಯುಸಿರೆಳೆದಿದ್ದಾಳೆ.
ರೇಖಾ ಪತಿ ಯೋಗೇಶ್ ಮಹಾರಾಷ್ಟ್ರದಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಮಕ್ಕಳಾದ ನಂತರ ರೇಖಾ ತನ್ನ ತಾಯಿ ಮನೆಯಲ್ಲಿ ವಾಸವಿದ್ದರು. ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ತಾಯಿಯ ಸಹಾಯವಿದ್ದರೂ ರೇಖಾ ಹೈರಾಣಾಗಿದ್ದರು.
ವಿಷ ಕುಡಿದು ಆಕೆ ಆಸ್ಪತ್ರೆಗೆ ಬಂದಾಗ ಹೇಳಿಕೆಯನ್ನು ರೆಕಾರ್ಡ್ ಮಾಡಲಾಗಿದೆ. ನನಗೆ ಅವಳಿ ಮಕ್ಕಳು ಇಷ್ಟ ಇರಲಿಲ್ಲ. ಎರಡು ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗಿಲ್ಲ. ಕೊಲ್ಲುವುದಕ್ಕೆ ಪ್ಲಾನ್ ಮಾಡಿ ಮದ್ದು ತರಿಸಿಕೊಂಡಿದ್ದೆ ಎಂದು ಹೇಳಿದ್ದಾಳೆ.
ತಾಯಿಯನ್ನು ಹೊರಗೆ ಕಳಿಸಿ ಹಾಲಿನಲ್ಲಿ ವಿಷ ಬೆರೆಸಿ ಮಕ್ಕಳಿಗೆ ನೀಡಿ, ತಾನೂ ಆ ಹಾಲನ್ನು ಕುಡಿದಿದ್ದಾಳೆ. ತಾಯಿ ಬಂದು ನೋಡಿದಾಗ ಮೂವರು ನೆಲದಲ್ಲಿ ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಷ್ಟೊತ್ತಿಗಾಗಲೇ ಮಕ್ಕಳು ಮೃತಪಟ್ಟಿದ್ದರು ಎನ್ನಲಾಗಿದೆ.