SHOCKING | ಅಮ್ಮನಿಗೆ ಸರಿಯಾಗಿ ಟ್ರೀಟ್‌ಮೆಂಟ್‌ ಕೊಟ್ಟಿಲ್ಲ: ವೈದ್ಯನಿಗೆ ಏಳು ಬಾರಿ ಚಾಕು ಇರಿದ ಮಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲವೆಂದು ವ್ಯಕ್ತಿಯೊಬ್ಬ ವೈದ್ಯರಿಗೆ ಚಾಕುವಿನಿಂದ ಇರಿದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಏಳು ಬಾರಿ ವೈದ್ಯರಿಗೆ ಇರಿದಿದ್ದಾನೆ, ವೈದ್ಯರನ್ನು ಐಸಿಯುನಲ್ಲಿ ದಾಖಲಿಸಲಾಗಿದ್ದು, ಆರೋಗ್ಯ ಗಂಭೀರವಾಗಿದೆ. ಪೊಲೀಸರ ಪ್ರಕಾರ ದಾಳಿಕೋರ ವಿಘ್ನೇಶ್ ಮತ್ತು ಆತನ ಸಹಚರರಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

ಪೆರುಂಗಲತ್ತೂರಿನ ವಿಘ್ನೇಶ್ ಎಂದು ಗುರುತಿಸಲಾದ ಶಂಕಿತ ವ್ಯಕ್ತಿ ಹೊರರೋಗಿ ಪ್ರವೇಶ ಪಾಸ್ ತೆಗೆದುಕೊಂಡು ಆಂಕೊಲಾಜಿ ವಿಭಾಗಕ್ಕೆ ಪ್ರವೇಶಿಸಿದ್ದ, ಡಾ ಬಾಲಾಜಿ ಜಗನ್ನಾಥ್ ಅವರು ಕರ್ತವ್ಯದಲ್ಲಿದ್ದರು. ಬೆಳಗ್ಗೆ 10.30ರ ಸುಮಾರಿಗೆ ಘಟನೆ ನಡೆದಿದೆ, ಆರೋಪಿ ವಿಘ್ನೇಶ್ ಜೊತೆಗೆ ಇನ್ನೂ ಕೆಲವರು ಇದ್ದರು. ವರದಿಗಳ ಪ್ರಕಾರ, ವಿಘ್ನೇಶ್ ಅವರ ತಾಯಿ ಪ್ರೇಮಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.

ಚಿಕಿತ್ಸೆಯ ಬಗ್ಗೆ ವೈದ್ಯರೊಂದಿಗೆ ತೀವ್ರ ವಾಗ್ವಾದ ನಡೆಸಿದರು ಮತ್ತು ಪ್ರೇಮಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ಆರೋಪಿಸಿದರು. ಕೆಲ ಕಾಲ ವಾಗ್ವಾದದ ನಂತರ ಕೋಪಗೊಂಡ ವಿಘ್ನೇಶ್ ಚಾಕು ತೆಗೆದು ವೈದ್ಯರ ಕುತ್ತಿಗೆಗೆ ಇರಿದಿದ್ದಾನೆ. ಅಲ್ಲಿದ್ದ ಜನರು ಕೂಡಲೇ ವೈದ್ಯರಿಗೆ ಸಹಾಯ ಮಾಡಲು ಓಡಿ ಬಂದರು, ಅವರನ್ನು ಐಸಿಯುಗೆ ಕರೆದೊಯ್ದರು. ದಾಳಿಯ ನಂತರ ಆರೋಪಿ ಪರಾರಿಯಾಗಲು ಯತ್ನಿಸಿದ್ದು ಭದ್ರತಾ ಸಿಬ್ಬಂದಿ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ.

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಲೈಂಜರ್ ಸೆಂಟಿನರಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಅಗತ್ಯ ಚಿಕಿತ್ಸೆಗೆ ಆದೇಶಿಸಿದ್ದೇನೆ ಎಂದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!