ಹೊಸದಿಗಂತ ವರದಿ, ಮಡಿಕೇರಿ:
ಹಸು ಮೇಯಿಸಲು ತೆರಳಿದ್ದ ಸಂದರ್ಭ ತಾಯಿ-ಮಗ ನದಿಗೆ ಬಿದ್ದು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮತ್ತೊಂದು ಶವ ಪತ್ತೆಯಾಗಿದೆ.
ದಕ್ಷಿಣ ಕೊಡಗಿನ ಬಿ ಶೆಟ್ಟಿಗೇರಿ ಗ್ರಾಮದ ಚಟ್ಟಂಗಡ ಪ್ರಕಾಶ್ ಎಂಬವರ ಪತ್ನಿ ರೇಖಾ (32) ಹಾಗೂ ಮಗ ಕಾರ್ಯಪ್ಪ(12) ಶನಿವಾರ ಜಸು ಮೇಯಿಸಲು ತೆರಳಿದ್ದ ಸಂದರ್ಭ ಲಕ್ಷ್ಮಣತೀರ್ಥ ನದಿಯಲ್ಲಿ ನೀರು ಪಾಲಾಗಿದ್ದರು.
ಭಾನುವಾರ ರೇಖಾ ಅವರ ಮೃತದೇಹ ಪತ್ತೆಯಾಗಿದ್ದರೆ, ಭಾನುವಾರ ಅಪರಾಹ್ನ ಕಾರ್ಯಪ್ಪನ ಶವ ನದಿಯಲ್ಲಿ ಪತ್ತೆಯಾಗಿದೆ.
ಗ್ರಾಮಸ್ಥರಾದ ಅಲ್ಲುಮಾಡ ಮುಕುಂದ, ದೇಯಂಡ ಸುಭಾಷ್, ಮುಕುಂದರವರ ಕಾರ್ಮಿಕರಾದ ಚುಬ್ರ, ಮಣಿ ಹಾಗೂ ಪುಟ್ಟ ಅವರುಗಳು ಸೋಮವಾರ ಘಟನೆ ನಡೆದ ಸ್ಥಳದಿಂದ ಬಹು ದೂರದವರೆಗೂ ಹುಡುಕಾಟ ನಡೆಸುವುದರೊಂದಿಗೆ ಮೃತದೇಹವನ್ನು ಪತ್ತೆಹಚ್ಚಿದ್ದಾರೆನ್ನಲಾಗಿದೆ.