ವಿಮಾನ ಹತ್ತುತ್ತಿದ್ದ ಮಹಿಳೆಗೆ ಪ್ರವೇಶ ದ್ವಾರದಲ್ಲೇ ನಿಂತು ಶಾಕ್ ನೀಡಿದ ಪೈಲೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಣಕ್ಕಾಗಿ ವಿಮಾನ ಏರುವ ಮಹಿಳೆಯೊಬ್ಬರು ಬಾಗಿಲ ಬಳಿ ನಿಂತಿದ್ದ ವ್ಯಕ್ತಿಯನ್ನು ಕಂಡು ಭಾವೋದ್ವೇಗಕ್ಕೆ ಒಳಗಾದ ಅಪರೂಪದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ಇಷ್ಟಕ್ಕೂ ಬಾಗಿಲ ಬಳಿ ನಿಂತಿದ್ದುದು ಬೇರಾರೂ ಅಲ್ಲ, ಆ ವಿಮಾನದ ಪೈಲೆಟ್. ಅರೆ, ಪೈಲೆಟ್ ಅಲ್ವಾ ಎಂದು ಹತ್ತಿರ ಬಂದು ನೋಡಿದರೆ ಮಹಿಳೆಗೆ ಶಾಕ್ ಆ ಪೈಲೆಟ್ ಬೇರಾರೂ ಅಲ್ಲ, ತನ್ನ ಕರುಳಕುಡಿ ಎಂದು ಗೊತ್ತಾದಾಗ ಕ್ಷಣ ಕಾಲ ಭಾವುಕರಾದ ಮಹಿಳೆ ಮಗನ ಕೈಯನ್ನು ಹಿಡಿದುಕೊಂಡು ಖುಷಿಪಟ್ಟಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಮಗ, ತಾಯಿಯನ್ನು ವಿಮಾನ ಚಲಾಯಿಸುವ ಕಾಕ್‌ಪಿಟ್‌ಗೆ ಕರೆದೊಯ್ದು ಕೂರಿಸಿ ಮತ್ತಷ್ಟು ಸಂತಸ ಮೊಗೆದುಕೊಟ್ಟಿದ್ದಾನೆ. ಬಳಿಕ ಮಗನೇ ಚಲಾಯಿಸುತ್ತಿರುವ ವಿಮಾನದಲ್ಲಿ ಪ್ರಯಾಣಿಸಿ ಸಾರ್ಥಕ ಕ್ಷಣಗಳನ್ನು ಅನುಭವಿಸಿದ್ದಾರೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೈಲೆಟ್ ‘ನಾನು ಹಾರಲು ಪ್ರಾರಂಭಿಸಿದಾಗಿನಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದೆ. ಅಂತಿಮವಾಗಿ ಜೈಪುರಕ್ಕೆ ಮನೆಗೆ ಮರಳಲು ನನಗೆ ಅವಕಾಶ ಸಿಕ್ಕಿತು’ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!