ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸರ್ಪದೋಷ ನಿವಾರಣೆಗೆ ಪುಟ್ಟ ಕಂದನ ಕತ್ತು ಸೀಳಿ ಗಹಗಹಿಸಿ ನಕ್ಕ ಕ್ರೂರಿ ತಾಯಿ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮೂಢನಂಬಿಕೆಯಿಂದ ತಾಯಿಯೊಬ್ಬಳು ತನ್ನದೇ ಹಸುಗೂಸಿನ ಕುತ್ತಿಗೆ ಸೀಳಿ ಕೊಂದಿದ್ದಾಳೆ.
ಅರಗಿಸಿಕೊಳ್ಳಲು ಆಗುವುದಿಲ್ಲ ಎಂದರೂ ಇದು ನಿಜ.. ಈ ಘಟನೆ ನಡೆದಿರುವುದು ತೆಲಂಗಾಣದ ಸೂರ್ಯಪೇಟೆಯಲ್ಲಿ. ಆರು ತಿಂಗಳ ಮಗುವಿನ ಕತ್ತು ಸೀಳಿ ಕೊಂದಿದ್ದು ಕ್ರೂರಿ ತಾಯಿ ಭಾರತಿ.
ಈಕೆಗೆ ಇದು ಎರಡನೇ ಮದುವೆ. ಆರು ತಿಂಗಳ ಹಿಂದಷ್ಟೇ ಮಡಿಲಿನಲ್ಲಿ ಕಂದಮ್ಮನನ್ನು ಕೂರಿಸಿಕೊಂಡಿದ್ದಳು. ಈ ಮಧ್ಯೆ ಮನೆಯವರಿಗೆ, ಗಂಡನಿಗೆ ಕೆಲವು ಕಷ್ಟಗಳು ಎದುರಾಗಿವೆ. ಯಾರದ್ದೋ ಮಾತು ಕೇಳಿ ತನಗೆ ಸರ್ಪದೋಷ ಇದೆ ಎಂದು ದೃಢವಾಗಿ ನಂಬಿದ್ದಾಳೆ. ನಂತರ ಯಾವುದೋ ವಿಡಿಯೋ ಒಂದರಲ್ಲಿ ಸರ್ಪದೋಷಕ್ಕೆ ಮುಕ್ತಿ ಸಿಗಲು ಮಗುವನ್ನು ಕೊಲ್ಲಬೇಕು ಎಂದು ತನ್ನದೇ ಕಂದನ ಎಳೆಕುತ್ತಿಗೆ ಸೀಳಿ ಕೊಂದಿದ್ದಾಳೆ.
ಮಗುವನ್ನು ಸಾಯಿಸಿದ ನಂತರ ಸಂಬಂಧಿಕರಿಗೆ ಕರೆ ಮಾಡಿ ‘ನಮ್ಮೆಲ್ಲಾ ಕಷ್ಟ ಇಂದಿಗೆ ಮುಗಿದಿದೆ. ಇನ್ನು ಯಾವ ಸಮಸ್ಯೆಯೂ ನಮ್ಮನ್ನು ಕಾಡುವುದಿಲ್ಲ. ನನ್ನ ಸರ್ಪದೋಷ ಮುಕ್ತವಾಗಿದೆ’ ಎಂದು ಗಹಗಹಿಸಿ ನಕ್ಕಿದ್ದಾಳೆ. ಅನುಮಾನಗೊಂಡ ಸಂಬಂಧಿಕರು ಕೆಲಸಕ್ಕೆ ತೆರಳಿದ್ದ ಗಂಡನಿಗೆ ವಿಷಯ ಮುಟ್ಟಿಸಿದ್ದಾರೆ. ಆತ ಮನೆಗೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಪುಟ್ಟ ಮಗು ಬಿದ್ದಿದೆ. ಪೊಲೀಸರಿಗೆ ಗಂಡ ದೂರು ನೀಡಿದ್ದು, ಭಾರತಿಯನ್ನು ಬಂಧಿಸಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss