ತಮಿಳುನಾಡಿನ ಅನ್ನಪೂರ್ಣೆ ʻಇಡ್ಲಿ ಅಮ್ಮನಿಗೆʼ ಹೊಸ ಮನೆ ಉಡುಗೊರೆಯಾಗಿ ನೀಡಿದ ಆನಂದ್‌ ಮಹೀಂದ್ರಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

85ರ ಇಳಿವಯಸ್ಸಲ್ಲೂ ನಿಸ್ವಾರ್ಥ ಮನೋಭಾವದಿಂದ ಹಸಿದು ಬಂದವರಿಗೆ 1ರೂಪಾಯಿಗೆ ಇಡ್ಲಿ ನೀಡಿ ಹೊಟ್ಟೆ ತುಂಬಿಸುತ್ತಿದ್ದ ಕಲಿಯುಗದ ಅನ್ನಪೂರ್ಣೇಶ್ವರಿ ಎನಿಸಿಕೊಂಡ ಇಡ್ಲಿ ಅಮ್ಮನಿಗೆ ಆನಂದ್‌ ಮಹೀಂದ್ರಾ ಮರೆಯಲಾಗದೆ ಉಡುಗೊರೆ ನೀಡಿದ್ದಾರೆ. ತಮಿಳುನಾಡಿನ ಪೆರು ಬಳಿಯ ವಡಿವೇಲಂಪಾಳ್ಯಂ ಎಂಬ ಹಳ್ಳಿಯಲ್ಲಿ ಇರಲು ವ್ಯವಸ್ಥಿತವಾದ ಜಾಗವಿಲ್ಲದೆ, ಮುರುಕಲು ಮನೆಯಲ್ಲಿಯೇ ಜೀವನ ನಡೆಸುತ್ತಿದ್ದ  ಕಮಲಾತಾಲ್‌ ಎಂಬ ʻಇಡ್ಲಿ ಅಮ್ಮʼನಿಗೆ ಆನಂದ್‌ ಮಹೀಂದ್ರಾ ತಾಯಂದಿರ ದಿನಾಚರಣೆ ಅಂಗವಾಗಿ ಹೊಸ ಮನೆ ಗಿಫ್ಟ್‌ ಮಾಡಿದ್ದಾರೆ.

ಈ ಬಗ್ಗೆ ಆನಂದ್‌ ಮಹೀಂದ್ರಾ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮದರ್ಸ್ ಡೇ ದಿನದಂದು ಇಡ್ಲಿ ಅಮ್ಮನಿಗೆ ಮನೆಯನ್ನು ಉಡುಗೊರೆಯಾಗಿ ನೀಡಲು ಬಯಸಿದ್ದೆ, ಸಮಯಕ್ಕೆ ಸರಿಯಾಗಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ್ದಕ್ಕಾಗಿ ನಮ್ಮ ತಂಡಕ್ಕೆ ಅಪಾರ ಕೃತಜ್ಞತೆಗಳು ಎಂದಿದ್ದಾರೆ. ಅವಳು ತಾಯಿಯ ಸದ್ಗುಣಗಳ ಸಾಕಾರ, ಕಾಳಜಿ ಮತ್ತು ನಿಸ್ವಾರ್ಥ ಸ್ವಭಾವ ಹೊಂದಿರುವವಳು. ಅವಳನ್ನು ಮತ್ತು ಅವಳ ಕೆಲಸವನ್ನು ಬೆಂಬಲಿಸಲು ನನಗೆ ಸಂತೋಷವಾಗುತ್ತಿದೆ. ನಿಮ್ಮೆಲ್ಲರಿಗೂ ತಾಯಂದಿರ ದಿನದ ಶುಭಾಶಯಗಳು! ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನೂ ಆನಂದ್‌ ಮಹೀಂದ್ರಾ ಇವರ ಕಾರ್ಯಕ್ಕೆ ಜನರಿಂದ ಮೆಚ್ಚುಗೆಯ ಸುರಿಮಳೆ ಹರಿದಿದೆ. 2021ರಲ್ಲಿ ಕೊಟ್ಟ ಮಾತಿನಂತೆ ಈ ವರ್ಷ ತಾಯಂದಿರ ದಿನಾಚರಣೆ ವೇಳೆಗೆ ಇಡ್ಲಿ ಅಮ್ಮನಿಗೆ ಮನೆಯನ್ನು ಉಡುಗೊರೆಯಾಗಿ ನೀಡಿ, ಅವರ ಮುಖದಲ್ಲಿ ನಗುವನ್ನು ತಂದು ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!