Tuesday, August 9, 2022

Latest Posts

ತಾಯಂದಿರೇ, ಮಗಳ ಮೊದಲ ಪಿರಿಯಡ್ಸ್ ಸಮಯದಲ್ಲಿ ಈ ವಿಷಯಗಳನ್ನು ಗಮನದಲ್ಲಿಡಿ…

ಈಗೆಲ್ಲಾ ಆಹಾರ ಕ್ರಮದಿಂದ ಹುಡುಗಿಯರು ಸಣ್ಣ ವಯಸ್ಸಿನಲ್ಲೇ ಖುತುಮತಿಯಾಗುತ್ತಿದ್ದಾರೆ. ಪಿರಿಯಡ್ಸ್ ಬಗ್ಗೆ ಸ್ವಲ್ಪವೂ ಅರಿವಿಲ್ಲದೆ ಇರುವ ವಯಸ್ಸಿನಲ್ಲಿ ಪಿರಿಯಡ್ಸ್ ಆಗುತ್ತಾರೆ. ಈ ಬಗ್ಗೆ ಯಾರ ಬಳಿಯೂ ಮಾತನಾಡಲು ಇಷ್ಟಪಡೋದಿಲ್ಲ. ಈಗ ಅವರ ಸ್ನೇಹಿತೆ ತಾಯಿಯೇ ಆಗಬೇಕು. ಪಿರಿಯಡ್ಸ್‌ನ ಆಗುಹೋಗುಗಳ ಬಗ್ಗೆ ಈ ರೀತಿ ಮಾಹಿತಿ ನೀಡಿ…

  • ಯೋಗ, ಮಾಡರೇಟ್ ಆದ ವ್ಯಾಯಾಮ ಮಾಡಿಸಿ. ಇದರಿಂದ ಹೊಟ್ಟೆನೋವು ಕಮ್ಮಿ ಆಗುತ್ತದೆ.
  • ತಲೆ ತಿರುಗುವುದು, ಅತಿಯಾದ ನೋವು ತಾಳಲಾರದೆ ಒದ್ದಾಡುವುದು ನಾರ್ಮಲ್ ಅಲ್ಲ, ತಕ್ಷಣ ವೈದ್ಯರನ್ನು ಭೇಟಿ ಮಾಡಿ.
  • ಆಕೆಯಲ್ಲಿ ಮೂಡ್ ಸ್ವಿಂಗ್ಸ್ ಕಾಣಿಸಿದರೆ ಅದನ್ನು ನಿರ್ಲಕ್ಷಿಸಬೇಡಿ. ಆಕೆಗೆ ಸಪೋರ್ಟ್ ಮಾಡಿ. ಅರ್ಥ ಮಾಡಿಕೊಳ್ಳಿ.
  • ಪಿರಿಯಡ್ಸ್ ಸಮಯದಲ್ಲಿ ಹೆಚ್ಚು ಕಾಫಿ ಹಾಗೂ ಜಂಕ್ ಫುಡ್ ತಿನ್ನಲು ಬಿಡಬೇಡಿ.
  • ಸರಿಯಾಗಿ ಪಿರಿಯಡ್ಸ್ ಆಗದಿದ್ದರೆ ಅಥವಾ ಎರಡೇ ದಿನಕ್ಕೆ ಬ್ಲಡ್ ಫ್ಲೋ ನಿಂತು ಹೋದರೆ ನಿರ್ಲಕ್ಷಿಸದೆ ವೈದ್ಯರನ್ನು ಕಾಣಿ.
  • ಮನೆಯಲ್ಲಿ ಅವಳಿಗೋಸ್ಕರ ಹೀಟಿಂಗ್ ಪ್ಯಾಡ್ ತಂದಿಡಿ, ಆಕೆ ಸ್ಕೂಲ್ ಅಥವಾ ಕಾಲೇಜಿಗೆ ಹೋಗಲು ಒಪ್ಪದಿದ್ದರೆ ಫೋರ್ಸ್ ಮಾಡಬೇಡಿ.
  • ಹೆಚ್ಚು ಬಿಸಿಯಾದ ದ್ರವ ಆಹಾರ ನೀಡಿ, ಬೆಚ್ಚಗಿನ ಸ್ನಾನ ಮಾಡಲು ಹೇಳಿ.
  • ಹೆಚ್ಚು ನಿದ್ದೆ ಅವಶ್ಯ ಇದೆ. ಕಳೆದುಕೊಂಡ ಎನರ್ಜಿಯನ್ನು ಪಡೆದುಕೊಳ್ಳಲು ನಿದ್ದೆ ಮಾಡಲು ಹೇಳಿ.
  • ಮನೆಯಲ್ಲಿ ಗಂಡನ ಜೊತೆಯೂ ಮಗಳ ಎದುರಿಗೇ ಪಿರಿಯಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡಿ, ಆಕೆಗೆ ಇದೊಂದು ವಿಯರ್ಡ್ ವಿಷಯ ಎನಿಸಬಾರದು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss