ಎರಡು ವರ್ಷದೊಳಗಿನ ಮಕ್ಕಳು ಎಂದರೆ ಈಗಷ್ಟೆ ದವಡೆ ಹಲ್ಲು ಬಂದಿರುವಂತಹ ಮಗು. ಕೆಲವು ತಾಯಂದಿರು ಮಕ್ಕಳಿಗೆ ಹಲ್ಲು ಬಂದ ತಕ್ಷಣ ಬೇಕಾಬಿಟ್ಟು ಆಹಾರಗಳನ್ನು ಕೊಡುತ್ತಾರೆ. ತಾವು ಏನೆಲ್ಲ ಸೇವಿಸುತ್ತಾರೋ ಅವೆಲ್ಲವನ್ನೂ ಕೊಡುತ್ತಾರೆ. ಆದರೆ ಹೀಗೆ ಮಾಡಿದರೆ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳ ಜೀರ್ಣಕ್ರಿಯೆ ದೊಡ್ಡವರಷ್ಟು ಸ್ಟ್ರಾಂಗ್ ಇರುವುದಿಲ್ಲ. ಕಬ್ಬಿಣಾಂಶ, ವಿಟಮಿನ್ ಎ ಮತ್ತು ಸಿ ಮೊದಲಾದ ಇಮ್ಯುನೋ ನ್ಯೂಟ್ರಿಯೆಂಟ್ಗಳಿರುವ ಆಹಾರವನ್ನು ಮಕ್ಕಳಿಗೆ ನೀಡಬೇಕು. ಯಾವೆಲ್ಲ ಆಹಾರ ನೀಡಬೇಕು ಇಲ್ಲಿದೆ ನೋಡಿ..
- ಹಣ್ಣುಗಳನ್ನು ಚಿಕ್ಕದಾಗಿ ಕಟ್ ಮಾಡಿ ತಿನ್ನಲು ಕೊಡಿ.
- ಹೆಸರು ಕಾಳುಗಳನ್ನು ಮೊಳಕೆ ಬರಿಸಿ ಕೊಡಿ.
- ಟೊಮಾಟೊ, ಬೀನ್ಸ್, ಕ್ಯಾರೆಟ್ ಸೂಪ್ ತಯಾರಿಸಿ ನೀಡಬಹುದು.
- ಸೌತೆಕಾಯಿಯನ್ನು ಚಿಕ್ಕ ಚಿಕ್ಕ ಗಾಲಿ ಮಾಡಿ ತಿನ್ನಲು ಕೊಡಿ.
- ರಾಗಿ ಹಿಟ್ಟನ್ನು ಹಾಲಿಗೆ ಹಾಲಿ ಮಾಲ್ಟ್ ಮಾಡಿ ದಿನದಲ್ಲಿ ಒಂದು ಹೊತ್ತು ಕುಡಿಯಲು ಕೊಡಿ.
- ಕರಿದ ಪದಾರ್ಥ, ಸಿಹಿ, ಉಪ್ಪು, ಹುಳಿ ಹೆಚ್ಚಿರುವ ಆಹಾರಗಳನ್ನು ನೀಡಬೇಡಿ.
- ಸೋಯಾ ಬೇಯಿಸಿ ನೀಡದಲ್ಲಿ ಮಗುವಿಗೆ ಅಗೆಯಲು, ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.
- ತರಕಾರಿ, ಸೊಪ್ಪುಗಳಿಂದ ತಯಾರಿಸಿದ ಪರೋಟಾ ನೀಡಬಹುದು.
- ಮೃದು ಅನ್ನಕ್ಕೆ ಹಾಲು ಹಾಕಿ ತಿನ್ನಲು ಕೊಡಿ.
- ಆದಷ್ಟು ಹಾಲು, ಮೊಟ್ಟೆ ಕೊಡಿ. ಇದರಲ್ಲಿ ಅಧಿಕ ಪ್ರಮಾನದ ಪ್ರೋಟಿನ್ ಇರುತ್ತದೆ.