Saturday, July 2, 2022

Latest Posts

ತಾಯಿಯ ಗರ್ಭ- ಸಮಾಧಿ ಮಾತ್ರ ಹೆಣ್ಣಿಗೆ ಸುರಕ್ಷಿತ: ಸೂಸೈಡ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆನ್ನೈನ ಪೂನಮಲ್ಲಿ ಬಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಲೈಂಗಿಕ ಕಿರುಕುಲಾದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ವೇಳೆ ಆಕೆ ಸೂಸೈಡ್ ನೋಟ್ ಬರೆದಿಟ್ಟು,ಅದರಲ್ಲಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಹಾಗು ಸಮಾಜದಲ್ಲಿ ಹೆಣ್ಣುಮಕ್ಕಳು ಯಾವ ರೀತಿ ಅಸುರಕ್ಷಿತವಾಗಿ ಬದುಕುವ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಉಲ್ಲೇಖಿಸಿದ್ದಾಳೆ.
ತನ್ನ ತಾಯಿ ಮತ್ತು ತಂದೆ ಕೆಲಸ ನಿಮಿತ್ತ ಹೊರಹೋದ ವೇಳೆ ವಿದ್ಯಾರ್ಥಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೂಸೈಡ್ ನೋಟ್​ ನಲ್ಲಿ ಬಾಲಕಿಯ ಸಾವಿಗೆ ಲೈಂಗಿಕ ಕಿರುಕುಳವೇ ಕಾರಣ ಎಂಬುದು ಬಯಲಾಗಿದೆ.
ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಡೆತ್​ನೋಟ್​ ನಲ್ಲಿ, ‘ಸಮಾಜದಲ್ಲಿ ನಾವು ಯಾರನ್ನೂ ನಂಬಲಾಗದು. ಶಿಕ್ಷಕರು, ಸಂಬಂಧಿಕರನ್ನು ಎಂದಿಗೂ ನಂಬಬೇಡಿ. ಹೆಣ್ಣಿಗೆ ತಾಯಿಯ ಗರ್ಭ ಮತ್ತು ಸಮಾಧಿ ಮಾತ್ರ ಸುರಕ್ಷಿತವಾದ ಸ್ಥಳವಾಗಿವೆ ಬರೆದಿಟ್ಟಿದ್ದಾಳೆ.
ಸಮಾಜದಲ್ಲಿ ಹೆಣ್ಣು ಮಕ್ಕಳು ಬದುಕುವುದೇ ಕಷ್ಟವಾಗಿದೆ. ನನ್ನ ಸಾವಿಗೆ ನ್ಯಾಯ ಸಿಗಬೇಕು. ಪ್ರತಿ ತಂದೆ – ತಾಯಿ ತಮ್ಮ ಗಂಡು ಮಕ್ಕಳಿಗೆ ಹೆಣ್ಣನ್ನು ಗೌರವಿಸುವುದನ್ನು ಹೇಳಿ ಕೊಡಬೇಕು. ನನಗೆ ಮಾನಸಿಕ ಹಿಂಸೆಯಿಂದಾಗಿ ರಾತ್ರಿ ನಿದ್ದೆಯನ್ನೇ ಕಳೆದುಕೊಂಡಿದ್ದೆ .ಲೈಂಗಿಕ ಕಿರುಕುಳವು ಅಸಹನೀಯವಾಗುತ್ತಿದೆ ಮತ್ತು ಅದರಿಂದ ನಾನು ಅಪಾರವಾದ ನೋವನ್ನು ಅನುಭವಿಸುತ್ತಿದ್ದೇನೆ. ನನಗೆ ಯಾರೂ ಬೇಡ ಎನಿಸುತ್ತಿದೆ. ನನಗೆ ಯಾರನ್ನೂ ನಂಬಲು ಆಗುತ್ತಿಲ್ಲ. ಹೀಗಾಗಿ, ನಾನು ಸಮಾಧಿ ಸೇರಲು ನಿರ್ಧರಿಸಿದ್ದೇನೆ ಎಂದು ಬರೆದಿದ್ದಾಳೆ.
ಇನ್ನು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆ ವಿದ್ಯಾರ್ಥಿ, ಬಾಲಕಿಯನ್ನು ದೈಹಿಕ ಸಂಪರ್ಕಕ್ಕಾಗಿ ಪದೆ ಪದೇ ಪೀಡಿಸುತ್ತಿದ್ದ. ಇದರಿಂದ ವಿದ್ಯಾರ್ಥಿನಿ ಮಾನಸಿಕವಾಗಿ ಕುಗ್ಗಿದ್ದಳು ಎಂದು ತಿಳಿದಿದೆ. ಇನ್ನು ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss