ಸಕ್ರಿಯ ಜ್ವಾಲಾಮುಖಿ ಮೌಂಟ್ ಎಟ್ನಾ ಸ್ಫೋಟ: ಎಲ್ಲೆಡೆ ಆವರಿಸಿದೆ ದಟ್ಟ ಹೊಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಗತ್ತಿನಲ್ಲಿ ಸಕ್ರಿಯವಾಗಿರುವ ಜ್ವಾಲಾಮುಖಿಗಳಲ್ಲಿ ಇಟಲಿಯ ಮೌಂಟಿ ಎಟ್ನಾ ಕೂಡ ಒಂದಾಗಿದ್ದು, ಈ ಜ್ವಾಲಾಮುಖಿ ಸ್ಫೋಟಗೊಂಡಿದೆ. ಜ್ವಾಲಾಮುಖಿ ಇದೀಗ ಸ್ಫೋಟಗೊಂಡಿದ್ದು, ಬರೋಬ್ಬರಿ 12 ಕಿ.ಮೀ. ದೂರದವರೆಗೆ ಹೊಗೆ ಆವರಿಸಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸಿಸಲಿಯ ಸುತ್ತಮುತ್ತ ದಟ್ಟ ಹೊಗೆ ಆವರಿಸಿದ್ದು, ಆಕಾಶದಲ್ಲಿ ಕಪ್ಪುಹೊಗೆ ಕಂಡು ಜನರು ಹೆದರಿದ್ದಾರೆ. ಟ್ವಿಟರ್‌ನಲ್ಲಿ ಎಎಫ್‌ಪಿ ನ್ಯೂಸ್ ಏಜೆನ್ಸಿ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ವಿಡಿಯೋದಲ್ಲಿ ಕಣ್ಣು ಹಾಯಿಸಿದಷ್ಟು ದೂರ ಕಪ್ಪು ದಟ್ಟ ಹೊಗೆ ಆವರಿಸಿದ್ದು ಕಾಣಿಸಿದೆ. ಇದರಿಂದ ಯಾವುದೇ ಹಾನಿಯಾದ ವರದಿಯಾಗಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!