ರಷ್ಯಾದ ಗಡಿಗಳಿಗೆ ಅಮೆರಿಕದ 12,000 ಸೈನಿಕರ ನಿಯೋಜನೆ: ಜೋ ಬಿಡೆನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ವಿರುದ್ಧ ಆಕ್ರಮಣ ನಡೆಸುತ್ತಿರುವ ರಷ್ಯಾವನ್ನು ಸೋಲಿಸೋಕೆ ಅಮೆರಿಕ ತನ್ನ 12 ಸಾವಿರ ಸೈನಿಕರನ್ನು ರಷ್ಯಾ ಗಡಿಗೆ ಕಳುಹಿಸಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಉಕ್ರೇನ್‌ ಮೇಲಿನ ಯುದ್ಧದಲ್ಲಿ ರಷ್ಯಾ ವಿಜಯಶಾಲಿಯಾಗುವುದಿಲ್ಲ. ಒಕ್ಕೂಟದ ರಾಷ್ಟ್ರಗಳ ಪ್ರತಿ ಇಂಚು ಭೂಮಿಯನ್ನು ರಕ್ಷಿಸುತ್ತೇವೆ ಎಂದು ರಷ್ಯಾಕ್ಕೆ ಎಚ್ಚರಿಕೆ ವಾರ್ನಿಂಗ್‌ ನೀಡಿದ್ದಾರೆ.
ಈಗಾಗಲೇ ರಷ್ಯಾ ಪಡೆಯನ್ನು ಹಿಮ್ಮೆಟ್ಟಲು ಉಕ್ರೇನ್‌ ಜನತೆ ತಮ್ಮ ಧೈರ್ಯ, ಶೌರ್ಯವನ್ನು ಪ್ರದರ್ಶಿಸಿದ್ದಾರೆ. ಈಗ ಅಮೆರಿಕ ಭದ್ರತಾ ನೆರವು ನೀಡುವುದು ನಿರ್ಣಾಯಕವಾಗಿದೆ. ಉಕ್ರೇನ್‌ ಗೆ ಬೆಂಬಲವಾಗಿ ನಮ್ಮ ಯುರೋಪ್‌ ಮಿತ್ರರಾಷ್ಟ್ರಗಳೊಂದಿಗೆ ನಿಲ್ಲಲಿದ್ದೇವೆ. ಈ ನಿಟ್ಟಿನಲ್ಲಿ ನಾವು ರಷ್ಯಾದ ಗಡಿಯಲ್ಲಿ 12 ಸಾವಿರ ಸೈನಿಕರನ್ನು ನಿಯೋಜಿಸಿದ್ದೇವೆ. ಲಾಟ್ವಿಯಾಮ ಎಸ್ಟೋನಿಯಾ, ಲಿಥುವೇನಿಯಾ, ರೊಮೇನಿಯಾ ಮತ್ತು ಸೆಟ್ರಾ ದೇಶಗಳ ಗಡಿಗಳಲ್ಲಿ ತಂಡಗಳನ್ನು ನಿಯೋಜಿಸಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!