spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಿತ್ರ ನಟ ದರ್ಶನ್ ಫಾರಂಗೆ ಕಳ್ಳರ ಕಾಟ: 10 ಸಾವಿರ ರೂ. ಮೌಲ್ಯದ ತೆಂಗಿನಕಾಯಿ ಕಳವು

- Advertisement -Nitte

ಹೊಸ ದಿಗಂತ ವರದಿ, ಮೈಸೂರು:

ಮೈಸೂರು-ತಿ.ನರಸೀಪುರ ತಾಲೂಕಿನ ರಸ್ತೆಯ ಕೆಂಪಯ್ಯನಹುoಡಿ ಗ್ರಾಮದಲ್ಲಿರುವ ನಟ ದರ್ಶನ್ ಫಾರ್ಮ್ ಹೌಸ್‌ಗೆ ಕಳ್ಳರ ಕಾಟ ಶುರುವಾಗಿದೆ. ಇತ್ತೀಚೆಗೆ ಇಲ್ಲಿದ್ದ ಮೂರು ಕುರಿಗಳನ್ನು ಕಳ್ಳತನ ಮಾಡಿದ್ದರು. ಇದೀಗ ಸುಮಾರು 10 ಸಾವಿರ ರೂ. ಮೌಲ್ಯದ ತೆಂಗಿನಕಾಯಿ ಕಳ್ಳತನವಾಗಿದೆ.
ತೋಟದಲ್ಲಿ 400 ತೆಂಗಿನ ಮರಗಳಿವೆ. ನಿತ್ಯ 300 ಕಾಯಿಗಳು ಮರದಿಂದ ಬೀಳುತ್ತಿದ್ದವು. ಆದರೆ, ನಿನ್ನೆ ತೆಂಗಿನಕಾಯಿಗಳನ್ನು ತೆಗೆಯಲು ಹೋದ ವೇಳೆ ಒಂದೇ ಒಂದು ತೆಂಗಿನ ಕಾಯಿ ಇರಲಿಲ್ಲ. ತೋಟದಲ್ಲಿ ತೆಂಗಿನಕಾಯಿ ಕಳವಿನ ಬಗ್ಗೆ ಫಾರ್ಮ್ ಹೌಸ್ ನೋಡಿಕೊಳ್ಳುವ ಚಂದ್ರಕುಮಾರ್, ತಿ.ನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಂದ್ರಕುಮಾರ್  ತೋಟದಲ್ಲಿ ಕೆಲಸ ಮಾಡುವ ನಾಗರಾಜು ಮತ್ತು ನಜೀಮ್ ಎಂಬವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss