Thursday, August 18, 2022

Latest Posts

ಚಿತ್ರ ನಟ ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ: ಹೋಟೆಲ್ ಸಿಬ್ಬಂದಿ ಗಂಗಾಧರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಮೈಸೂರು:

ಚಾಲೆಂಜಿoಗ್ ಸ್ಟಾರ್ ದರ್ಶನ್ ಅವರು ಹೋಟೆಲ್ ಸಿಬ್ಬಂದಿಗೆ ಥಳಿಸಿರುವ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ದರ್ಶನ್ ನನ್ನ ಮೇಲೆ ಹಲ್ಲೆ ನಡಿಸಿಲ್ಲ ಎಂದು ಸಂದೇಶ್ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಗಂಗಾಧರ್ ಸ್ಪಷ್ಟಪಡಿಸಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬoಧಿಸಿದoತೆ ತನಿಖೆಗೆಂದು ಹೋಟೆಲ್‌ಗೆ ಆಗಮಿಸಿದ ಮೈಸೂರಿನ ಎನ್.ಆರ್ ಎಸಿಪಿ ಶಶಿಧರ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡಕ್ಕೆ ಘಟನೆ ಕುರಿತು ಮಾಹಿತಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದಲಿತ ಸಮುದಾಯಕ್ಕೆ ಸೇರಿದವನಲ್ಲ. ನಾನು ನಾಯರ್ ಸಮುದಾಯಕ್ಕೆ ಸೇರಿದವನು. ಅಂದು ಚಿತ್ರ ನಟ ದರ್ಶನ್ ಅವರು ನಮ್ಮ ಮೇಲೆ ಸಿಟ್ಟಾಗಿದ್ದು ನಿಜ. ಆದರೆ ನನ್ನ ಮೇಲೆ ಯಾವುದೇ ರೀತಿಯ ದೈಹಿಕ ಹಲ್ಲೆ ಮಾಡಿಲ್ಲ. ಹಲ್ಲೆಯಾಗಿದ್ದರೆ ನನ್ನ ಮುಖದಲ್ಲಿ ಗಾಯಗಳಿರಬೇಕಿತ್ತು. ಆದರೆ ನೋಡಿ ಯಾವುದೇ ಗಾಯಗಳೂ ಇಲ್ಲ ಎಂದು ಮಾಸ್ಕ್ ತೆಗೆದು ಮುಖ ತೋರಿಸಿದರು.
ನನಗೆ ಮದುವೆಯಾಗಿಲ್ಲ ನಾನೂ ಈಗಲೂ ಬ್ಯಾಚ್ಯುಲರ್. ಹಾಗಾಗಿ ನನ್ನ ಹೆಂಡತಿ ಹೋಟೆಲ್ ಬಳಿ ಪೊರಕೆ ಹಿಡಿದು ಬಂದಿದ್ದಳು ಎಂಬುದು ಸುಳ್ಳು. ಬಹುಶಃ ಹೋಟೆಲ್ ಕ್ಲೀನ್ ಮಾಡುವ ಮಹಿಳೆಯನ್ನು ನೋಡಿ, ಹಾಗೆ ಭಾವಿಸಿರಬಹುದು. ಹೊಟೆಲ್ ಎದುರು ಕಸ ಗುಡಿಸೋರು ಪೊರಕೆ ತಂದಿರುತ್ತಾರೆ. ಅದನ್ನ ನೋಡಿ ಪೊರಕೆ ತಂದಿದ್ದಾರೆ ಎಂದು ಚಿತ್ರ ನಿರ್ದೇಶಕ ಇಂದ್ರಜಿತ್ ಹೇಳಿದ್ದಾರೆ ಎಂದು ಗಂಗಾಧರ್ ತಿಳಿಸಿದರು.
ನಮ್ಮ ಹೋಟೆಲ್ ಸಪ್ಲೆಯರ್ ಮೇಲೆ ದರ್ಶನ್ ರೇಗಾಡಿ, ಗಲಾಟೆ ನಡೆದಿರುವುದು ನಿಜ. ದರ್ಶನ್ ನಿಂದ ಬೈಯಿಸಿಕೊಂಡಿರುವ ಸಪ್ಲೆಯರ್ ಉತ್ತರ ಭಾರತವನಾಗಿದ್ದು, ಊರಿಗೆ ಹೋಗಿದ್ದಾನೆ. ಯಾರಿಗೂ ದರ್ಶನ್ ಹಲ್ಲೆ ಮಾಡಿಲ್ಲ ಅಂತ ಹೋಟೆಲ್ ಮಾಲೀಕ ಸಂದೇಶ್ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!