ದೇಶಾದ್ಯಂತ ಹತ್ತು ಸಾವಿರ ಸಿನಿಮಾ ಥಿಯೇಟರ್‌ಗಳನ್ನು ನಿರ್ಮಿಸಲಿರುವ ಕೇಂದ್ರ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮನರಂಜನಾ ಕ್ಷೇತ್ರವನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ತೇಜಿಸಲು ದೇಶಾದ್ಯಂತ ಸಿನಿಮಾ ಥಿಯೇಟರ್‌ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. CSC ಇ-ಆಡಳಿತ ಸೇವೆಗಳು, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಅಡಿಯಲ್ಲಿ ಕೇಂದ್ರ ಸರ್ಕಾರದ ಇಲಾಖೆ, ಅಕ್ಟೋಬರ್ ಸಿನಿಮಾಸ್ ಸಂಸ್ಥೆಗೂಡಿ ಜೊತೆಗೆ 2024 ರ ಅಂತ್ಯದ ವೇಳೆಗೆ ಗ್ರಾಮೀಣ ಪ್ರದೇಶಗಳಲ್ಲಿ 10,000 ಚಿತ್ರಮಂದಿರಗಳನ್ನು ತೆರೆಯಲು ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಸಿಎಸ್‌ಸಿ ಇ-ಆಡಳಿತವು ಅಕ್ಟೋಬರ್ ಸಿನಿಮಾಸ್‌ನೊಂದಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿನಿಮಂದಿರ ನಿರ್ಮಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದಂತೆ ಗ್ರಾಮೀಣ ಪ್ರದೇಶದಲ್ಲಿ 100-200 ಆಸನ ಸಾಮರ್ಥ್ಯದ ಸಣ್ಣ ಚಿತ್ರಮಂದಿರಗಳನ್ನು ತೆರೆಯಬೇಕು. 2023ರ ವೇಳೆಗೆ 1500 ಮತ್ತು 2024ರ ವೇಳೆಗೆ 10000 ಥಿಯೇಟರ್‌ಗಳನ್ನು ನಿರ್ಮಿಸಲು ಬಯಸಿದೆ. ಇದು ಯುವಕರು, ಉದ್ಯಮಿಗಳು ಮತ್ತು ಆಸಕ್ತರನ್ನು ಒಳಗೊಂಡಿರುತ್ತದೆ.

ಈ ಮಟ್ಟಿಗೆ ಅಕ್ಟೋಬರ್ ಸಿನಿಮಾಸ್ ಕೂಡ ಆಫರ್ ಘೋಷಿಸಿದೆ. ಕೇವಲ 21000 ಪಾವತಿಸಿ ಮೊದಲ ನೋಂದಣಿ ಮಾಡಿಸಿ, ಕೇವಲ 15 ಲಕ್ಷದಲ್ಲಿ ಥಿಯೇಟರ್‌ ನಿರ್ಮಿಸುವುದಾಗಿ ಇದಕ್ಕೆ ಕೇಂದ್ರ ಸರ್ಕಾರ ಬೆಂಬಲ ನೀಡಲಿದೆ ಎಂದು ಹೇಳಲಾಗಿದೆ. ಈ ಕುರಿತು ಸರ್ಕಾರ ಅಧಿಕೃತ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ. ಇದಕ್ಕಾಗಿ ಈಗಾಗಲೇ 5000 ಮಂದಿ ಆಸಕ್ತಿ ತೋರಿ ನೋಂದಣಿ ಮಾಡಿಕೊಂಡಿದ್ದಾರೆ ಎಂದೂ ಹೇಳಲಾಗಿದೆ. ನಿಮ್ಮಲ್ಲಿ ಯಾರಾದರೂ ಥಿಯೇಟರ್ ನಿರ್ಮಿಸಲು ಆಸಕ್ತಿ ಹೊಂದಿದ್ದರೆ, ಅವರ ವೆಬ್‌ಸೈಟ್‌ನಲ್ಲಿ ನೋಂದಾಯಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!