ಹೊಸದಿಗಂತ ಡಿಜಿಟಲ್ ಡೆಸ್ಕ್
ಕಳೆದ ಹಲವು ದಿನಗಳಿಂದ ಥಿಯೇಟರ್ ಗಳಿಗಾಗಿ ಕಾಯುತ್ತಿದ್ದ ಚಿತ್ರಗಳು ಇದೀಗ ಒಂದೇ ಸಮನೆ ಬಿಡುಗಡೆಗೆ ಸಿದ್ದವಾಗಿದ್ದು, ನಾಳೆ ಬರೋಬ್ಬರಿ ಕರ್ನಾಟಕದಲ್ಲಿ 18 ಚಿತ್ರಗಳು ಬಿಡುಗಡೆ ಆಗುತ್ತಿವೆ.
ಮಾಮೂಲಿಯಾಗಿ ವಾರಕ್ಕೆ ಹೆಚ್ಚೆಂದರೆ ಐದಾರು ಚಿತ್ರಗಳು ಬಿಡುಗಡೆ ಆಗುವುದು ವಾಡಿಕೆ. ಆದರೂ ಚಿತ್ರಗಳು ರಿಲೀಸ್ ಆದರೆ, ಥಿಯೇಟರ್ ಸಮಸ್ಯೆಯ ಜೊತೆ ಪ್ರೇಕ್ಷಕರಿಗೆ ಕಿರಿಕಿರಿ ಇರುತ್ತದೆ.
ಇದೀಗ ನಾಳೆ 18 ಚಿತ್ರಗಳ ಪೈಕಿ ಕನ್ನಡದಲ್ಲೇ 10 ಸಿನಿಮಾಗಳು ರಿಲೀಸ್ ಆಗುತ್ತಿದ್ದು, ವಿಜಯಾನಂದ, ಬಾಂಡ್ ರವಿ, ಡಾ.56, ನಾನೇ ರಾಕ್ಷಸ, ದ್ವಿಪಾತ್ರ, ಸುನಾಮಿ 143, ಕ್ಷೇಮಗಿರಿಯಲ್ಲಿ ಕರ್ನಾಟಕ, ಪ್ರಾಯಶಃ, ಮೈಸೂರು ಡೈರೀಸ್, ಪಂಖುರಿ ಚಿತ್ರಗಳು ಈ ವಾರ ತೆರೆಕಾಣುತ್ತಿವೆ. ಇವುಗಳ ಜೊತೆಗೆ ಇನ್ನೂ ಎಂಟು ಚಿತ್ರಗಳು ಪರಭಾಷೆಯ ಚಿತ್ರಗಳಾಗಿವೆ.
ಸಲಾಂ ವೆಂಕಿ, ನಾಯಿ ಶೇಖರ್ ರಿಟರ್ನ್ಸ್, ಗುರ್ತುಂದ ಶೀಲಕಾಲಂ, ವರಲಾರು ಮುಕ್ಕಿಯಂ, ಪಂಚತಂತ್ರಂ, ಮುಖಚಿತ್ರಂ ಸೇರಿದಂತೆ ಹಲವು ಪರಭಾಷಾ ಚಿತ್ರಗಳು ಕೂಡ ಈ ವಾರ ಕನ್ನಡದಲ್ಲಿ ರಿಲೀಸ್ ಆಗುತ್ತಿದ್ದು, ಥಿಯೇಟರ್ ಗಳಲ್ಲೂ ಪ್ರದರ್ಶನಕ್ಕೆ ಪೈಪೋಟಿ ಶುರುವಾಗಿದೆ.