ಸಮುದಾಯದತ್ತ ಸಾಗುತ್ತಿದೆ ‘ಮಂಕಿ ಫಾಕ್ಸ್’: ಎಚ್ಚರಿಕೆ ನೀಡಿದೆ WHO…

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಬೆನ್ನಲ್ಲಿಯೇ ಜಗತ್ತಿನ ನಿದ್ದೆಗೆಡಿಸಿರುವ ಮಂಕಿ ಪಾಕ್ಸ್, ಸಮುದಾಯಕ್ಕೆ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಖುದ್ದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಜಗತ್ತಿನ 29 ರಾಷ್ಟ್ರಗಳಲ್ಲಿ ಈಗಾಗಲೇ ಬಿರುಗಾಳಿ ಎಬ್ಬಿಸಿರುವ ಈ ಕಾಯಿಲೆ ಇನ್ನಷ್ಟು ವ್ಯಾಪಕವಾಗಿ ಪಸರಿಸುತ್ತಿದ್ದು, ಹೆಚ್ಚು ಪ್ರಕರಣ ಹೊಂದಿರುವ ರಾಷ್ಟ್ರಗಳು  ಸೋಂಕು ಹರಡದಂತೆ ಖಡಕ್ ನಿಗಾ ಇರಿಸಬೇಕು ಎಂದು ಅದು ಸೂಚನೆ ನೀಡಿದೆ.
ಇದುವರೆಗೂ ಮಂಕಿಪಾಕ್ಸ್‌ನಿಂದಾಗಿ ಸಾವನ್ನಪ್ಪಿರುವ ಪ್ರಕರಣಗಳು ವರದಿಯಾಗಿಲ್ಲವಾದರೂ, ಇತ್ತೀಚಿನ ಮಾಹಿತಿಯಂತೆ ಕಾಯಿಲೆ ಕೆಲವು ದೇಶಗಳಲ್ಲಿ ಸಮುದಾಯದಲ್ಲಿ ಹರಡುತ್ತಿರುವುದು ಕಂಡುಬರುತ್ತಿದೆ. ಜೊತೆಗೆ ಮಹಿಳೆಯರನ್ನೇ ಇದು ಹೆಚ್ಚಾಗಿ ಕಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!