ಹೊಸದಿಗಂತ ವರದಿ, ಶಿವಮೊಗ್ಗ:
ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರ್ ಹೊಸ ರೈಲ್ವೆ ಮಾರ್ಗದ ಟೆಂಡರ್ ಅನ್ನು ಶೀಘ್ರ ಕರೆಯುವ ಕೆಲಸವನ್ನು ತ್ವರಿತಗೊಳಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.
ಲೋಕಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಈಹೊಸ ಮಾರ್ಗದ ನಿರ್ಮಾಣದ ಶೇ.50ರಷ್ಟುವೆಚ್ಚವನ್ನು ಹಂಚಿಕೊಳ್ಳಲು ಮತ್ತು ಭೂಮಿ ಉಚಿತವಾಗಿ ನೀಡಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. 2021-22ರ ಕೇಂದ್ರ ಬಜೆಟ್ನಲ್ಲಿ ಯೋಜನೆಗೆ100 ಕೋಟಿರೂ. ಒದಗಿಸಲಾಗಿದೆ.ಯೋಜನೆಯವೊದಲ ಹಂತಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇಭೂಮಿಯನ್ನುರೈಲ್ವೆಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
2020-21ರಬಜೆಟ್ನಲ್ಲಿ ಕೋಟೆಗಂಗೂರ್ ನಲ್ಲಿ ಕೋಚಿಂಗ್ ಡಿಪೋಗೆ ಅನುಮತಿ ನೀಡಲಾಗಿದೆ. ಕರ್ನಾಟಕ ಸರ್ಕಾರ ಈಗಾಗಲೇ ಭೂಮಿಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿದೆ. ಕೋಚಿಂಗ್ ಡಿಪೋದ ಕೆಲಸವನ್ನು ಪ್ರಾರಂಭಿಸಲು ರೈಲ್ವೆಈಗಾಗಲೇ ಏಜೆನ್ಸಿಯನ್ನು ನೇಮಿಸಿದೆ. ಆದರೆ ಕೋಚಿಂಗ್ ಡಿಪೋದ ಅತ್ಯಗತ್ಯ ಭಾಗವಾಗಿರುವ ಟರ್ಮಿನಲ್ ರೈಲ್ವೆ ನಿಲ್ದಾಣವನ್ನು ನಿರ್ಮಿಸುವ ಪ್ರಸ್ತಾಪ ಮಂಡಳಿ ಇನ್ನೂ ಮಂಜೂರು ಮಾಡಿಲ್ಲ.ಆದಷ್ಟು ಬೇಗ ಕೋಟೆಗಂಗೂರಿನಲ್ಲಿ ಕೋಚಿಂಗ್ ಡಿಪೋದ ಜೊತೆಗೆ ಟರ್ಮಿನಲ್ ರೈಲ್ವೆ ನಿಲ್ದಾಣವನ್ನು ನಿರ್ಮಿಸಲು ಮಂಜೂರಾತಿ ನೀಡುವಂತೆ ಕೋರಿದರು.