ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರ್ಸನಲ್ ವಿಷಯಗಳಿಗೆ ಸುದ್ದಿಯಾಗದ ನಟಿ ಮೃಣಾಲ್ ಠಾಕುರ್ ಇದೇ ಮೊದಲ ಬಾರಿಗೆ ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಿದ್ದಾರೆ.
ನಾನು ಕೂಡ ಸಾಮಾನ್ಯರಂತೆ, ಏಳು ತಿಂಗಳ ಹಿಂದಷ್ಟೆ ಬ್ರೇಕಪ್ ಆಗಿದೆ. ನಾನು ನಟಿ ಎನ್ನುವ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡರು, ಆಕ್ಟರ್ ಆಗೋದನ್ನು ಯಾಕೆ ಯಾರು ಅಕ್ಸೆಪ್ಟ್ ಮಾಡೋದಿಲ್ಲ ಎಂದು ಪ್ರಶ್ನಿಸಿದ್ದಾರೆ.
ನಟನೆಯ ವಿಚಾರದಲ್ಲಿ ನಮ್ಮದು ಶಿಸ್ತುಬದ್ಧ ಕುಟುಂಬ, ತುಂಬಾ ಕಟ್ಟುನಿಟ್ಟು ಇದೆಲ್ಲಾ ಸರಿ ಹೋಗಲ್ಲ ಎಂದು ಆತ ಹೇಳಿದ. ಇದೆಲ್ಲಾ ಕೇಳಿದ ಮೇಲೆ ಬಹಳ ನೋವಾಯ್ತು. ಇಬ್ಬರ ಪರಸ್ಪರ ಒಪ್ಪಿಗೆಯ ಮೇರೆಗೆ ಬ್ರೇಕಪ್ ಮಾಡಿಕೊಂಡೆವು. ಇದೆಲ್ಲಾ 7 ತಿಂಗಳ ಹಿಂದೆ ನಡೆದಿರೋದು ಎಂದಿದ್ದಾರೆ ಮೃಣಾಲ್. ಬ್ರೇಕಪ್ ಆದ ವೇಳೆ, ನಾನು ದುಃಖಿಸಲಿಲ್ಲ. ನಾನು ಬದುಕಿನಲ್ಲಿ ಕೆಲವು ಬ್ರೇಕಪ್‌ಗಳು ಆಗಿವೆ. ನನಗೆ ನೋಡಲು ಸಖತ್ ಲುಕ್ ಇರುವ ಹುಡುಗ ಬೇಕಿಲ್ಲ, ಆದರೆ ಒಳ್ಳೆಯ ಗುಣವಿದ್ದರೆ ಸಾಕು ಎಂದು ನಟಿ ಮಾತನಾಡಿದ್ದಾರೆ.