Saturday, August 13, 2022

Latest Posts

ಹೊಸ ಅವತಾರದಲ್ಲಿ ಧೋನಿ ಪ್ರತ್ಯಕ್ಷ : ಫೋಟೋ ನೋಡಿ ಅಭಿಮಾನಿಗಳು ಗಲಿಬಿಲಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಇವರು ಕ್ಲೀನ್ ಶೇವ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಎಂ.ಎಸ್. ಧೋನಿ ಅವರ ಸನ್ಯಾಸಿ ತರಹದ ನೂತನ ಲುಕ್ ಬಿಡುಗಡೆಗೊಳಿಸಿದ ಕೆಲವೇ ಹೊತ್ತಿನಲ್ಲಿ ಈ ಫೋಟೋ ಸಿಕ್ಕಾಪಟೆ ವೈರಲ್ ಆಗಿದೆ.

ಹಾಗಂತ ಧೋನಿಗೆ ಹೊಸ- ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಒಂದೊಂದು ಬಾರಿ ಒಂದೊಂದು ಅವತಾರ, ಗೆಟಪ್ ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಆದರೆ ಈ ಸನ್ಯಾಸಿ ಫೋಟೋ ಮಾತ್ರ ಈ ಹಿಂದಿನ ಎಲ್ಲಾ ಫೋಟೋಗಳಿಗಿಂತ  ಭಿನ್ನವಾಗಿದೆ.

ಏಪ್ರಿಲ್ ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಬೇರೆ ಶುರುವಾಗುತ್ತಿದೆ. ಈ ಬೆನ್ನಲ್ಲೇ ಧೋನಿ ಅವರು ಈ ಅವತಾರ ಯಾಕೆ ತಾಳಿದ್ದಾರೆ ಅನ್ನೋದು ಅಭಿಮಾನಿಗಳ ಪ್ರಶ್ನೆಯಾಗಿದೆ. ಇದು ಚರಿತ್ರೆ ಸೃಷ್ಠಿಸೋ ಅವತಾರವೇ? ಕಾದು ನೋಡಬೇಕಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss