ಮತ್ತೆ ಟೀಂ ಇಂಡಿಯಾಕ್ಕೆ ಮರಳಲಿದ್ದಾರೆ ಎಂ.ಎಸ್​. ಧೋನಿ

ಹೊಸದಿಗಂತ ಡಿಜಟಲ್‌ ಡೆಸ್ಕ್‌
ವಿಶ್ವದ ಪ್ರಬಲ ತಂಡ ಟೀಂ ಇಂಡಿಯಾ ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಟಿ 20 ವಿಶ್ವಕಪ್‌ ಸೆಮಿಫೈನಲ್ ಹಂತದಲ್ಲಿ ತಂಡವು ನಿರಾಶಾದಾಯಕವಾಗಿ ನಿರ್ಗಮಿಸಿದ ನಂತರ, ಭಾರತೀಯ ಕ್ರಿಕೆಟ್ ಮಂಡಳಿಯು T20 ತಂಡವನ್ನು ಮರಳಿ ಟ್ರ್ಯಾಕ್‌ಗೆ ತರಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಾಜಿ ನಾಯಕ ಎಂ.ಎಸ್‌.ಧೋನಿಯವರಿಗೆ ಮಹತ್ವದ ಜವಾಬ್ದಾರಿ ವಹಿಸಲು ಚಿಂತನೆ ನಡೆಸಿದೆ.
ಭಾರತವು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಅವಮಾನಕರ ಸೋಲನ್ನು ಅನುಭವಿದ ಬಳಿಕ ಬಹಳಷ್ಟು ಟೀಕೆಗಳು ಕೇಳಿಬಂದಿವೆ. ಅನೇಕ ತಜ್ಞರು ಮತ್ತು ಅಭಿಮಾನಿಗಳು ಟಿ 0 ಕ್ರಿಕೆಟ್‌ ನಲ್ಲಿ ಭಾರತದ ‘ಹಳಿಯ ವಿಧಾನಗಳನ್ನು’ ಟೀಕಿಸಿದ್ದಾರೆ. ಜೊತೆಗೆ ಮೂರು ಸ್ವರೂಪದ ಕೋಚ್‌ ಆಗಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ಸಾಕಷ್ಟು ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಎಂ.ಎಸ್‌ ಧೋನಿ ಟಿ 20 ತಂಡದ ನಿರ್ದೇಶಕನ ಸ್ಥಾನವನ್ನು ನೀಡಿ ಆಟಗಾರರನ್ನು ಟಿ 20 ಮಾದರಿಗೆ ಸಿದ್ಧಗೊಳಿಸುವ ಮತ್ತು ಈ ಸ್ವರೂಪದಲ್ಲಿ ಉತ್ಕೃಷ್ಟತೆ ಸಾಧಿಸಲು ಸಹಾಯ ಮಾಡುವ ಜವಾಬ್ದಾರಿಯನ್ನು ನೀಡಲಾಗುತ್ತಿದೆ ಎನ್ನಲಾಗಿದೆ. ಜೊತೆಗೆ ಟಿ 20 ಮಾದರಿಗೆ ಧೋನಿಯನ್ನು ಕೋಚ್‌ ಆಗಿ ನೇಮಿಸುವ ಪ್ರಸ್ತಾಪವೂ ಇದ್ದು ಈ ತಿಂಗಳ ಕೊನೆಯಲ್ಲಿ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದೆ ಎಂದು ಹೇಳಲಾಗುತ್ತದೆ.
ಧೋನಿ ಅನುಭವ ಮತ್ತು ಕೌಶಲ್ಯಗಳನ್ನು ಬಳಸುವುದು ಬಿಸಿಸಿಐ ಗುರಿಯಾಗಿದೆ. 2024 ರ T20 ವಿಶ್ವಕಪ್‌ಗೆ ತಯಾರಿ ಮತ್ತು ಯೋಜನೆಗಳನ್ನು ರೂಪಿಸಲು ಧೋನಿ ಅನುಭವ ಮತ್ತು ಕೌಶಲ್ಯಗಳನ್ನು ಬಳಸಲು ಬಿಸಿಸಿಐ ಉತ್ಸುಕವಾಗಿದೆ.
ಧೋನಿ ಪ್ರಸ್ತುತ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಆವೃತ್ತಿ ಬಳಿಕ ಅವರು ಐಪಿಎಲ್​ನಿಂದ ನಿವೃತ್ತಿ ಪಡೆಯುವ ಸಾಧ್ಯತೆ ಇದೆ. ಆ ಬಳಿಕ ಅವರು ಬಿಸಿಸಿಐ ನೀಡುವ ಹುದ್ದೆಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!