ಗ್ರಾಹಕರು ಬಳಸಬಹುದಾದ ಡ್ರೋನ್ ಕ್ಯಾಮರಾ ಲಾಂಚ್ ಮಾಡಿದ ಎಂಎಸ್‌ಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹೇಂದ್ರ ಸಿಂಗ್ ಧೋನಿ ಗ್ರಾಹಕರು ಬಳಸಬಹುದಾದ ಡ್ರೋನ್ ಕ್ಯಾಮೆರಾ ಒಂದನ್ನು ಲಾಂಚ್ ಮಾಡಿದ್ದು, ಇದಕ್ಕೆ ಡ್ರೋನಿ ಎಂದು ಹೆಸರಿಡಲಾಗಿದೆ. ಚೆನ್ನೈನ ಡ್ರೋನ್ ಸ್ಟಾರ್ಟ್ ಅಪ್ ಗರುಡಾ ಏರೋಸ್ಪೇಸ್ ಇದನ್ನು ತಯಾರಿಸಿದ್ದು, ಡ್ರೋನಿ ಡ್ರೋನ್ ಇದು ಕ್ವಾಡ್‌ಕಾಪ್ಟರ್ ಕ್ಯಾಮರಾ ಡ್ರೋನ್ ಆಗಿದೆ.

ವಿವಿಧ ಕಣ್ಗಾವಲು ಉದ್ದೇಶಗಳಿಗಾಗಿ ಇದನ್ನು ಬಳಸಬಹುದು, ಈ ವರ್ಷದ ಅಂತ್ಯದ ವೇಳೆಗೆ ಮಾರುಕಟ್ಟೆಯಲ್ಲಿ ಡ್ರೋನಿ ಲಭ್ಯವಾಗಲಿದೆ. ಗರುಡ ಏರೋಸ್ಪೇಸ್ ಭಾನುವಾರ ಕೃಷಿ ಕೀಟನಾಶಕ ಸಿಂಪಡಣೆಗೆ ಬಳಸುವ ಬ್ಯಾಟರಿ ಚಾಲಿತ ಹೊಸ ಕಿಸಾನ್ ಡ್ರೋನ್‌ನ್ನು ಬಿಡುಗಡೆ ಮಾಡಿದೆ. ದಿನಕ್ಕೆ ೩೦ ಎಕರೆ ಭೂಪ್ರದೇಶದಲ್ಲಿ ಡ್ರೋನ್ ಬಳಸಿ ಕೀಟನಾಶಕ ಸಿಂಪಡಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!