spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ವರದಾನವಾದೀತೇ ಈ ಮಸೂದೆ?

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪ್ರಾರಂಭದಲ್ಲಿ ಪ್ರತಿಪಕ್ಷಗಳ ಗದ್ದಲದಿಂದಲೇ ವ್ಯಯವಾದ ಮುಂದಾರು ಅಧಿವೇಶನದ ಕಲಾಪ ಗುರುವಾರ ತುಸು ಹಳಿಗೆ ಬರುವ ನಿರೀಕ್ಷೆ ಇದ್ದು, ಹಲವು ಮುಖ್ಯ ಮಸೂದೆಗಳು ಮಂಡನೆಯಾಗುವುದಕ್ಕೆ ಕಾಯ್ದಿವೆ.

ದ ಫ್ಯಾಕ್ಟೋರಿಂಗ್ ರೆಗ್ಯುಲೇಷನ್ ಅಮೆಂಡ್ಮೆಂಟ್ ಬಿಲ್, 2020 ಇಂದು ಸಂಸತ್ತಿನಲ್ಲಿ ಮಂಡನೆಯಾಗುವ ನಿರೀಕ್ಷೆ ಇದ್ದು, ಪ್ರಸ್ತಾವಿತ ತಿದ್ದುಪಡಿಯಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂ ಎಸ್ ಎಮ್ ಇ) ಹಣದ ಹರಿವನ್ನು ಖಾತ್ರಿಪಡಿಸುವಲ್ಲಿ ಇದು ನೆರವಾಗಲಿದೆ. ಕೊರೋನಾ ಆಘಾತದಿಂದ ಈ ವಲಯಕ್ಕೆ ಹಣದ ಹರಿವು ದೊಡ್ಡ ಸವಾಲಿನ ವಿಷಯವೇ ಆಗಿರುವಾಗ ಈ ತಿದ್ದುಪಡಿ ಮಾಡಲಿರುವ ಸುಧಾರಣೆಯ ಬಗ್ಗೆ ಕುತೂಹಲ ಇದ್ದೇ ಇದೆ.

ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಾರ್ಪೋರೇಷನ್ ಸಂಸ್ಥೆಗಳು ( ಎನ್ ಬಿ ಎಫ್ ಸಿ) ಹೆಚ್ಚಿನ ಪಾತ್ರ ವಹಿಸುವುದಕ್ಕೆ ಅವಕಾಶವಿರುವುದರಿಂದ ಎಂ ಎಸ್ ಎಮ್ ಇ ಗಳು ತಮ್ಮ ಹಣದ ಹರಿವನ್ನು ಖಾತ್ರಿಪಡಿಸಿಕೊಳ್ಳಬಹುದಾಗಿದೆ. ಈ ತಿದ್ದುಪಡಿ ಪ್ರಕಾರ, ಕಂಪನಿಯೊಂದು ತನಗೆ ಮುಂದೆಂದೋ ಬರಬೇಕಾದ ಹಣದ ಪಾವತಿಯನ್ನು ಈ ಎನ್ ಬಿ ಎಫ್ ಸಿ ಗಳಿಗೆ ಮಾರಬಹುದು. ಇದರಿಂದ ಕಂಪನಿಗೆ ಎಷ್ಟೋ ದಿನ ಕಾಯ್ದು ಪಡೆಯಬೇಕಾಗಿದ್ದ ಹಣ ಆ ಕ್ಷಣಕ್ಕೆ ಸಿಗುತ್ತದೆ. ಮುಂದೆ ಹಣ ಪಡೆಯಬೇಕಾದ ನಿರ್ದಿಷ್ಟ ದಿನಾಂಕದಲ್ಲಿ ಎನ್ ಬಿ ಎಫ್ ಸಿ ಗಳು ಕಂಪನಿ ಪರವಾಗಿ ತಾವು ಆ ಹಣ ಪಾವತಿಸಿಕೊಳ್ಳುತ್ತವೆ. ಕಂಪನಿ ಅದಾಗಲೇ ಇವರಿಗೆ ತನಗೆ ಬರಬೇಕಿದ್ದ ಹಣದಲ್ಲಿ ರಿಯಾಯತಿ ಭಾಗವೊಂದನ್ನು ಕೊಟ್ಟಿರುತ್ತದೆ.

ಈವರೆಗಿನ ಕಾಯ್ದೆಯಲ್ಲಿ ಏನಿತ್ತು ಅಂದರೆ ಈ ರೀತಿಯ ‘ಫ್ಯಾಕ್ಚೋರಿಂಗ್’ ಕಾರ್ಯಕ್ಕೆ ಪ್ರವೇಶಿಸುವ ಎನ್ ಬಿ ಎಫ್ ಸಿ ಗಳು ತಮ್ಮ ಒಟ್ಟೂ ಮೌಲ್ಯದ ಶೇ. 50ರಷ್ಟು ಹಣವನ್ನು ಇದೇ ವಿಭಾಗದಲ್ಲಿ ತೊಡಗಿಸಬೇಕು ಹಾಗೂ ಇದೇ ವ್ಯವಹಾರದಿಂದ ಬರುವ ಆದಾಯ ಅವರ ನಿವ್ವಳ ಆದಾಯದಲ್ಲಿ ಶೇ.50ರ ಪಾಲು ಹೊಂದಿರಬೇಕು ಎಂದೆಲ್ಲ ನಿಯಮಗಳಿದ್ದವು. 

ಈ ತಿದ್ದುಪಡಿ ಅವನ್ನೆಲ್ಲ ಸಡಿಲಿಸುವುದರಿಂದ ಹೆಚ್ಚು ಹೆಚ್ಚು ಎನ್ ಬಿ ಎಫ್ ಸಿ ಗಳು ಈ ವ್ಯವಹಾರಕ್ಕೆ ಬರುವಂತಾಗುತ್ತದೆ. 

ಈ ಮಸೂದೆಯೂ ಸೇರಿದಂತೆ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿರುವ ಹಲವು ಮಸೂದೆಗಳ ಬಗ್ಗೆ ಹೊಸ ದಿಹಂತ ಆನ್ಲೈನ್ ಈ ವಿಡಿಯೋದಲ್ಲಿ ಬೆಳಕು ಚೆಲ್ಲಿದೆ. 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss