Wednesday, July 6, 2022

Latest Posts

ಮುಡಾದ ಮನೆಯಲ್ಲಿ ಅಕ್ರಮವಾಗಿ ವಾಸವಾಗಿದ್ದವರನ್ನು ತೆರವುಗೊಳಿಸಿ, ಮನೆ ವಶಕ್ಕೆ ತೆಗೆದುಕೊಂಡ ಅಧಿಕಾರಿಗಳು!

ದಿಗಂತ ವರದಿ, ಮೈಸೂರು:

ಆರ್ಥಿಕ ದುರ್ಬಲದವರಿಗಾಗಿ ಮುಡಾ ವತಿಯಿಂದ ನಿರ್ಮಿಸಲಾಗಿದ್ದ ಮನೆಯಲ್ಲಿ ಬರೋಬರೀ 15 ವರ್ಷಗಳಿಂದ ವಾಸವಾಗಿದ್ದ, ಸಾಲದು ಎಂದು ಬೇರೊಬ್ಬ ವ್ಯಕ್ತಿಯೊಬ್ಬರಿಗೆ ಬಾಡಿಗೆಗೆಂದು ಮನೆಯನ್ನೂ ನೀಡಿದ್ದ. ಇದನ್ನು ಇದೀಗ ಪತ್ತೆ ಹಚ್ಚಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಶುಕ್ರವಾರ ಕಾರ್ಯಚರಣೆ ನಡೆಸಿ, ಅಲ್ಲಿ ವಾಸಿವಿದ್ದವರನ್ನು ಖಾಲಿ ಮಾಡಿಸಿ, ಮನೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಘಟನೆ ನಡೆಯಿತು.
ಮೈಸೂರಿನ ರಾಮಕೃಷ್ಣ ನಗರದ ಐ ಬ್ಲಾಕ್ ಬಡಾವಣೆಯಲ್ಲಿ ದುರ್ಬಲ ವರ್ಗದವರಿಗಾಗಿ ಮನೆ ನಿರ್ಮಿಸಲಾಗಿತ್ತು.ಕುಮಾರ್ ಕ್ರಾಂತಿ ಎಂಬಾತ ಕಳೆದ 15 ವರ್ಷದಿಂದ ಈ ಮನೆಯಲ್ಲಿ ಅನಧಿಕೃತವಾಗಿ ವಾಸವಾಗಿದ್ದ. ಅಲ್ಲದೇ ರಘು ಎಂಬುವರಿಗೆ ಬಾಡಿಗೆಗೆ ನೀಡಿದ್ದ.ತಿಂಗಳಿಗೆ 8 ಸಾವಿರ ಬಾಡಿಗೆಯನ್ನ ಪಡೆದು ಅನುಭವಿಸುತ್ತಿದ್ದ. ಈ ಬಗ್ಗೆ ಮಾಹಿತಿ ಅರಿತ ಮುಡಾ ಆಯುಕ್ತ ಡಿ.ಬಿ.ನಟೇಶ್ ದಾಖಲೆಗಳನ್ನ ಪರಿಶೀಲಿಸಿ, ಇಂದು ಬೆಳ್ಳಂಬೆಳಗ್ಗೆ ಸರಸ್ವತಿಪುರಂ ಠಾಣೆ ಪೊಲೀಸರ ರಕ್ಷಣೆಯೊಂದಿಗೆ ಕಾರ್ಯಾಚರಣೆ ನಡೆಸಿ, ಅನಧಿಕೃತವಾಗಿ ವಾಸವಿದ್ದವರನ್ನ ತೆರುವುಗೊಳಿಸಿ, 75 ಲಕ್ಷ ರೂ ಮೌಲ್ಯದ ಮನೆಯನ್ನು ವಶಕ್ಕೆ ಪಡೆದು, ಅಲ್ಲಿ ಇದು ಮುಡಾ ಆಸ್ತಿ ಎಂಬ ಫಲಕವನ್ನು ಹಾಕಿದ್ದಾರೆ..
ಕಾರ್ಯಚರಣೆಯಲ್ಲಿ ಮುಡಾ ಅಧೀಕ್ಷಕ ಅಭಿಯಂತರ ಸತ್ಯನಾರಾಯಣ ಜೋಷಿ,ಮೋಹನ್ ವಲಯಾಧಿಕಾರಿಗಳಾದ ನಾಗೇಶ್,ಕೆ.ಆರ್.ಮಹೇಶ್,ರವೀಂದ್ರಕುಮಾರ್,ಕಿರಣ್,ಶಿವಣ್ಣ,ರವಿಶAಕರ್ ಮತ್ತಿತರರು ಭಾಗಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss