ಏಷಿಯನ್ ಚಾಂಪಿಯನ್ ಗೇಮ್ಸ್ ಚಿನ್ನಕ್ಕೆ ಮುತ್ತಿಕ್ಕಿದ ಮುಧೋಳದ ನಿಂಗಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಷಿಯನ್ ಚಾಂಪಿಯನ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಕುಸ್ತಿಪಟು ನಿಂಗಪ್ಪ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಮೂಲದ ಕುಸ್ತಿಪಟು ನಿಂಗಪ್ಪ 17 ವರ್ಷದೊಳಗಿನ ಕೆಜಿ ವಿಭಾಗದಲ್ಲಿ ನಡೆದ ಏಷಿಯನ್ ಚಾಂಪಿಯನ್ ಗೇಮ್ಸ್‌ದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಕಿರಗಿಸ್ತಾನದ ಬಿಸ್ಕ್‌ಕ್ ನಗರದಲ್ಲಿ ನಡೆದ ಏಷಿಯನ್ ಗೇಮ್ಸ್‌ದಲ್ಲಿ ಭಾಗವಹಿಸಿದ್ದ ನಿಂಗಪ್ಪ ರಾಷ್ಟ್ರಮಟ್ಟದ ನಾಲ್ಕು ಕುಸ್ತಿ ಕ್ರೀಡಾಪಟುಗಳನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಸದ್ಯ ಮುಧೋಳದಲ್ಲಿ ನಿಂಗಪ್ಪನ ಪಾಲಕರು ವಾಸವಾಗಿದ್ದಾರೆ. ಜಿಲ್ಲೆಯ ಮುಧೋಳ ಜೈ ಹನುಮಾನ ವ್ಯಾಯಾಮ ಶಾಲೆಯಲ್ಲಿ ಏಳು ವರ್ಷದಿಂದ ತರಬೇತಿ ಪಡೆದಿದ್ದಾರೆ. ರಾಜ್ಯಮಟ್ಟದ ಕುಸ್ತಿಯಲ್ಲಿ ಪ್ರಥಮ, ರಾಜಸ್ತಾನದಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿರುವ ನಿಂಗಪ್ಪ ಸಾಧನೆಯಿಂದ ಹರ್ಯಾಣದ ಕುಸ್ತಿ ಇಂಡಿಯನ್ ಕ್ಯಾಂಪ್‌ಗೆ ಆಯ್ಕೆಯಾಗಿದ್ದಾರೆ.
ಸದ ಹರ್ಯಾಣ ಇಂಡಿಯನ್ ಕ್ಯಾಂಪ್‌ದಲ್ಲಿರುವ ನಿಂಗಪ್ಪ ಕಳೆದರಡು ವರ್ಷದಿಂದ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಎಸ್‌ಎಸ್‌ಎಲ್‌ಸಿ ಅಧ್ಯಯನ ಮಾಡುತ್ತಿದ್ದಾರೆ. ತಂದೆ ತಾಯಿ ಮುಧೋಳದಲ್ಲಿದ್ದು, ಕೃಷಿ ಕಾರ್ಮಿಕರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!